ಪೊಲೀಸ್ v/s ಮಾಧ್ಯಮ ಮಿತ್ರರ ಕ್ರಿಕೆಟ್ ಪಂದ್ಯ: ಪೊಲೀಸರಿಗೆ ಜಯ - ದಾವಣಗೆರೆ ಪೊಲೀಸ್ ಕ್ರೀಡಾಕೂಟ ಸುದ್ದಿ
ದಾವಣಗೆರೆ: ನಗರದ ಹೈಸ್ಕೂಲ್ ಮೈದಾನದಲ್ಲಿ ವಾರ್ಷಿಕ ಪೊಲೀಸ್ ಕ್ರೀಡಾಕೂಟ ಹಿನ್ನಲೆ ದಾವಣಗೆರೆ ಪೊಲೀಸ್ ಹಾಗೂ ಮಾಧ್ಯಮ ತಂಡದ ನಡುವೆ ಕ್ರಿಕೆಟ್ ಪಂದ್ಯ ಆಯೋಜಿಸಲಾಗಿತ್ತು. ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ವರದಿಗಾರರ ಕೂಟದ ತಂಡ ನಿಗದಿತ ಓವರ್ನಲ್ಲಿ 8 ವಿಕೆಟ್ ನಷ್ಟಕ್ಕೆ 55 ರನ್ ಕಲೆಹಾಕಿತ್ತು. ಗುರಿ ಬೆನ್ನತ್ತಿದ್ದ ಪೊಲೀಸ್ ತಂಡ 56 ರನ್ ಗಳಿಸಿ ಗೆಲುವಿನ ನಗೆ ಬೀರಿತು. ಕ್ರೀಡಾಕೂಟದಲ್ಲಿ ಎಸ್ಪಿ ಹನುಮಂತರಾಯ, ಪ್ರೆಸ್ ಕ್ಲಬ್ ಅಧ್ಯಕ್ಷ ಬಿ ಎನ್ ಮಲ್ಲೇಶ್, ಮಾಜಿ ಅಧ್ಯಕ್ಷ ಬಸವರಾಜ್ ದೊಡ್ಮನಿ ಭಾಗವಹಿಸಿ ಎರಡು ತಂಡಕ್ಕೆ ಸ್ಪೂರ್ತಿ ತುಂಬಿದರು.