ಕರ್ನಾಟಕ

karnataka

ETV Bharat / videos

ತುಮಕೂರು: ರ‍್ಯಾಲಿಯಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದ ಟ್ರ್ಯಾಕ್ಟರ್ ತಡೆದ ಪೊಲೀಸರು - ಗಣರಾಜ್ಯೋತ್ಸವದಂದು ರೈತರ ಟ್ರ್ಯಾಕ್ಟರ್​ ಪರೇಡ್

By

Published : Jan 25, 2021, 6:39 PM IST

ಬೆಂಗಳೂರಿನಲ್ಲಿ ನಡೆಯಲಿರುವ ರೈತರ ಜಾಥಾದಲ್ಲಿ ಪಾಲ್ಗೊಳ್ಳಲು ಟ್ರ್ಯಾಕ್ಟರ್​ ಜೊತೆ ಹೋಗುತ್ತಿದ್ದ ರೈತರನ್ನು ತುಮಕೂರು ಜಿಲ್ಲೆ ಕೆಬಿ ಕ್ರಾಸ್ ಬಳಿ ಪೊಲೀಸರು ತಡೆದು ನಿಲ್ಲಿಸಿದ್ದಾರೆ. ಹತ್ತಕ್ಕೂ ಹೆಚ್ಚು ಟ್ರ್ಯಾಕ್ಟರ್​ಗಳಲ್ಲಿ ರೈತರು ಬೆಂಗಳೂರಿಗೆ ತೆರಳುತ್ತಿರುವ ಮಾಹಿತಿ ತಿಳಿದ ಪೊಲೀಸರು, ರೈತರನ್ನು ಅಡ್ಡಗಟ್ಟಿ ಟ್ರ್ಯಾಕ್ಟರ್​ಗಳನ್ನು ಸ್ಥಳದಲ್ಲಿಯೇ ನಿಲ್ಲಿಸಿ ಬಸ್​ನಲ್ಲಿ ಬೇಕಾದರೆ ಬೆಂಗಳೂರಿಗೆ ತೆರಳುವಂತೆ ಹೇಳಿದ್ದಾರೆ. ಇದಕ್ಕೆ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ರೈತರು ಹಾಗೂ ಪೊಲೀಸರ ನಡುವೆ ಕೆಲಕಾಲ ಮಾತಿನ ಚಕಮಕಿ ನಡೆದಿದೆ.

ABOUT THE AUTHOR

...view details