ಹಾಡಿನ ಮೂಲಕ ಕೊರೊನಾ ಜಾಗೃತಿ... ಎಸ್ಪಿ ವಿನೂತನ ಪ್ರಯತ್ನ
ರಾಯಚೂರು: ಕೊರೊನಾ ವೈರಾಣು ಕುರಿತು ರಾಯಚೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಗರದ ವೃತ್ತಗಳಲ್ಲಿ ಸಾಂಗ್ ಹಾಡುವ ಮೂಲಕ ಜಾಗೃತಿ ಮೂಡಿಸಲು ಮುಂದಾಗಿದ್ದಾರೆ. ನಗರದ ತೀನ್ ಕಂದಿಲ್ ವೃತ್ತದ ಬಳಿ ಮೈಕ್ ಹಿಡಿದು ಹಾಡುವ ಮೂಲಕ ಜಾಗೃತಿಗೆ ಮೂಡಿಸುತ್ತದ್ದಾರೆ. ಒಳಿತು ಮಾಡು ಮನುಷ್ಯ ಎನ್ನುವ ಹಾಡಿನ ದಾಟಿಯಲ್ಲಿ ಕೊರೊನಾ ವೈರಸ್ನಿಂದ ಆಗುವ ತೊಂದರೆ, ಅದನ್ನ ಹರಡದಂತೆ ತಡೆಯುವುದಕ್ಕೆ ಅನುಸರಿಸಬೇಕಾದ ಕ್ರಮಗಳು, ಇದಕ್ಕಾಗಿ ಹಗಲು ಶ್ರಮಿಸುತ್ತಿರುವ ಇಲಾಖೆಯ ಸಿಬ್ಬಂದಿ, ಅಧಿಕಾರಿಗಳ ಕಾರ್ಯ ವೈಖರಿ ಕುರಿತು ಹಾಡು ಇದಾಗಿದೆ. ಮನೆಯಿಂದ ಅನಶ್ಯಕವಾಗಿ ಹೊರಗಡೆ ಬಾರದಂತೆ ಎಚ್ಚರಿಕೆ ನೀಡಿದ್ದರೂ, ಕೆಲ ಜನರು ಸುಖಾ ಸುಮ್ಮನೆ ಓಡಾಡುತ್ತಿರುವುದನ್ನು ಅರಿತು, ವಿಭಿನ್ನವಾಗಿ ಜಾಗೃತಿ ಮೂಡಿಸಲು ಮುಂದಾದರು.