ಉಪ 'ಕದನ'ಕ್ಕೆ 2,896 ಪೊಲೀಸ್ ಸಿಬ್ಬಂದಿ ನಿಯೋಜನೆ - ಬೆಂಗಳೂರಿನ ಉಪಚುನಾವಣೆ ಕ್ಷೇತ್ರಗಳು
15 ಕ್ಷೇತ್ರಗಳ ಉಪಚುನಾವಣೆ ತುರುಸುಗೊಂಡಿದ್ದು, ಇನ್ನೇನು ಮತದಾನ ಪ್ರಕ್ರಿಯೆಗೆ ಕ್ಷಣಗಣನೆ ಪ್ರಾರಂಭವಾಗಿದೆ. ಬೆಂಗಳೂರಿನ 4 ವಿಧಾನಸಭೆ ಕ್ಷೇತ್ರಗಳಲ್ಲಿ ಬಿಗಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ. ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಸೂಚನೆಯಂತೆ ಸಿಬ್ಬಂದಿ ಸೂಕ್ಷ್ಮ, ಅತೀ ಸೂಕ್ಷ್ಮ ಪ್ರದೇಶಗಳಿಗೆ ನಿಯೋಜನೆಗೊಂಡಿದ್ದಾರೆ.