ರಂಗಪಂಚಮಿ ಹಿನ್ನೆಲೆ : ಹುಬ್ಬಳ್ಳಿಯಲ್ಲಿ ಯೋಧರ ಪಥ ಸಂಚಲನ - Holi full moon
ಹೋಳಿ ಹುಣ್ಣಿಮೆ ನಿಮಿತ್ತ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ನಡೆಯಲಿರುವ ರಂಗಪಂಚಮಿ ಹಿನ್ನೆಲೆಯಲ್ಲಿ ಹು-ಧಾ ಮಹಾನಗರ ಪೊಲೀಸ್ ಕಮೀಷನರೇಟ್ ವತಿಯಿಂದ ಫಥ ಸಂಚಲನ ನಡೆಯಿತು. ಪಥ ಸಂಚಲನದಲ್ಲಿ ರ‍್ಯಾಪಿಡ್ ಆ್ಯಕ್ಷನ್ ಪೋರ್ಸ್, ಸಿಆರ್ಪಿಎಫ್, ಸಿಎಆರ್ಎಫ್ ಸಾವಿರಾರು ಸಿಬ್ಬಂದಿ ಪಾಲ್ಗೊಂಡಿದ್ದರು. ಗ್ಲಾಸ್ ಹೌಸ್ ನಿಂದ ಆರಂಭಗೊಂಡ ಪಥ ಸಂಚಲನ ರಾಯಣ್ಣ ವೃತ್ತ, ಚನ್ನಮ್ಮ ವೃತ್ತ, ಜನತಾ ಬಜಾರ್ ಸೇರಿ ಹಲವೆಡೆ ಸಂಚರಿಸಿತು. ಹೋಳಿ ಹಬ್ಬವನ್ನು ಸೌಹಾರ್ದತೆಯಿಂದ ಆಚರಿಸುವಂತೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಯಿತು.