ಹುಬ್ಬಳ್ಳಿ: ರೈಲ್ವೆ ಪೊಲೀಸ್ ಸಮಯಪ್ರಜ್ಞೆಯಿಂದ ಬದುಕಿತು ಜೀವ.. ಎದೆ ಝಲ್ ಅನ್ನೋ ದೃಶ್ಯ - ಹುಬ್ಬಳ್ಳಿ ವಾಸ್ಕೋ ಡಿ ಗಾಮಾ ಪ್ಯಾಸೆಂಜರ್ ಟ್ರೈನ್
ಹುಬ್ಬಳ್ಳಿ: ರೈಲ್ವೆ ಸಿಬ್ಬಂದಿಯ ಸಮಯ ಪ್ರಜ್ಞೆಯಿಂದ ಪ್ರಯಾಣಿಕನೊಬ್ಬ ಪ್ರಾಣಾಪಾಯದಿಂದ ಪಾರಾದ ಘಟನೆ ಹುಬ್ಬಳ್ಳಿಯ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ. ಚಲಿಸುತ್ತಿದ್ದ ವಾಸ್ಕೋ ಡಿ ಗಾಮಾ ಪ್ಯಾಸೆಂಜರ್ ಟ್ರೈನ್ ಹತ್ತಲು ಹೋಗಿ ಆಯತಪ್ಪಿ ರೈಲ್ವೆ ಹಳಿಗೆ ಬೀಳುತ್ತಿದ್ದ ಪ್ರಯಾಣಿಕನನ್ನು ಅಲ್ಲೇ ಇದ್ದ ರೈಲ್ವೆ ಪೊಲೀಸ್ ಕೆ.ಎಂ. ಪಾಟೀಲ ರಕ್ಷಣೆ ಮಾಡಿದ್ದಾರೆ. ಇನ್ನು ರಕ್ಷಣೆ ಮಾಡುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ನೋಡಿದವರ ಎದೆ ಝಲ್ ಎನ್ನುವಂತಿದೆ. ಪ್ರಯಾಣಿಕನ ಜೀವ ರಕ್ಷಣೆ ಮಾಡಿದ ರೈಲ್ವೆ ಸಿಬ್ಬಂದಿ ಕಾರ್ಯಕ್ಕೆ ಹಿರಿಯ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.