ಜೈಲಿನಿಂದಲೇ ರೌಡಿಗಳ ಹತ್ಯೆಗೆ ಸಂಚು.. ಪೊಲೀಸರ ದಾಳಿಯಲ್ಲಿ ಬಗೆದಷ್ಟು ಮಾರಕಾಸ್ತ್ರ, ಮಾದಕ ವಸ್ತು ಪತ್ತೆ..
ಬೆಂಗಳೂರು : ಕೋವಿಡ್ ಸೋಂಕು ಕಡಿಮೆಯಾಗುತ್ತಿದ್ದಂತೆ ರಾಜ್ಯದಲ್ಲಿ ಅನ್‌ಲಾಕ್ ಮಾಡಲಾಗಿತ್ತು. ಇದನ್ನೇ ಬಂಡವಾಳವನ್ನಾಗಿಸಿಕೊಂಡು ಅಪರಾಧ ಕೃತ್ಯಗಳಿಗೆ ಇಳಿಯುವ ಸಿದ್ಧತೆಯಲ್ಲಿದ್ದ ರೌಡಿಗಳಿಗೆ ಸಿಲಿಕಾನ್ ಸಿಟಿ ಪೊಲೀಸರು ಇವತ್ತು ಬಿಗ್ ಶಾಕ್ ನೀಡಿದ್ದಾರೆ. ಇಂದು ಬೆಳ್ಳಂಬೆಳಗ್ಗೆ 2 ಸಾವಿರಕ್ಕೂ ಹೆಚ್ಚು ರೌಡಿಗಳ ಮನೆಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿದ್ದು, ಅನೇಕ ರೌಡಿಗಳನ್ನು ವಶಕ್ಕೆ ಪಡೆದು ಪರೇಡ್ ನಡೆಸಿದ್ದಾರೆ..