ಅಗತ್ಯ ವಸ್ತುಗಳ ಪೂರೈಸುವವರಿಗೆ ಪೊಲೀಸ್ರಿಂದ ಪಾಸ್.. ಪಡೆಯೋದ್ಹೇಗೆ, ಇಲ್ಲುಂಟು ಮಾಹಿತಿ! - ಕೊವಿಡ್ 19 ಎಫೆಕ್ಟ್ನಿಂದ ಇಡೀ ದೇಶ ಲಾಕ್ ಡೌನ್
ಬೆಂಗಳೂರು: ಕೊವಿಡ್ 19 ಎಫೆಕ್ಟ್ನಿಂದ ಇಡೀ ದೇಶ ಲಾಕ್ಡೌನ್ ಆಗಿದೆ. ಅಗತ್ಯ ವಸ್ತುಗಳ ಸೇವೆ ನೀಡುವವರಿಗೆ ಸರ್ಕಾರ ವಿನಾಯತಿ ಕೊಟ್ಟಿದೆ. ರಸ್ತೆಗಳಲ್ಲಿ ಓಡಾಡಲು ವರ್ತಕರು ಹಾಗೂ ಸೇವೆ ಸಲ್ಲಿಸುತ್ತಿರುವವರಿಗೆ ಪೊಲೀಸ್ ಇಲಾಖೆ ವಾಹನಗಳ ಪಾಸ್ ಹಾಗೂ ವೈಯಕ್ತಿಕ ಪಾಸ್ಗಳನ್ನು ವಿತರಿಸುತ್ತಿದೆ. ಈ ಪಾಸ್ ಇಲ್ಲದೆ ರಸ್ತೆಗಿಳಿದ್ರೆ ಪೊಲೀಸರು ಕೇಸ್ ದಾಖಲಿಸುವುದರ ಜೊತೆಗೆ ಲಾಠಿ ಏಟಿನ ರುಚಿ ತೋರಿಸುದ್ದಾರೆ. ಇದರಿಂದ ವರ್ತಕರು ಪಾಸ್ ಪಡೆಯಲು ಮುಗಿಬೀಳುತ್ತಿದ್ದಾರೆ. ಜಯನಗರದ ಸರಳದೇವಿ ಶಾಲೆಯಲ್ಲಿ ಪೊಲೀಸ್ ಇಲಾಖೆ ಪಾಸ್ ವಿತರಣೆ ಮಾಡುತ್ತಿದೆ. ಈ ಕುರಿತು ಈಟಿವಿ ಭಾರತ ಪ್ರತಿನಿಧಿ ಪ್ರತ್ಯಕ್ಷ್ಯ ವರದಿ ಮಾಡಿದ್ದಾರೆ..