ಹೆಲ್ಮೆಟ್, ಸೀಟ್ಬೆಲ್ಟ್ ಧರಿಸದಿದ್ರೆ ದಂಡ; ಸುಡು ಬಿಸಿಲಿನಲ್ಲಿ ಪೊಲೀಸರ ಕಾರ್ಯಾಚರಣೆ- ಪ್ರತ್ಯಕ್ಷ ವರದಿ - Police operation in hot sun
ಬೆಂಗಳೂರು: ಲಾಕೌಡೌನ್ ಹಿನ್ನೆಲೆ ವಾಹನ ಸವಾರರು ನಿಯಮ ಮೀರಿ ಸಂಚರಿಸುತ್ತಿದ್ದಾರೆ. ಹೀಗಾಗಿ, ಖುದ್ದು ಹಿರಿಯ ಅಧಿಕಾರಿಗಳೇ ಕಾರ್ಯಾಚರಣೆಗೆ ಇಳಿದು ವಾಹನಗಳನ್ನು ಜಪ್ತಿ ಮಾಡುತ್ತಿದ್ದಾರೆ. ಈವರೆಗೂ 36,900 ವಾಹನಗಳನ್ನು ಜಪ್ತಿ ಮಾಡಲಾಗಿದೆ. ಲಾಕ್ಡೌನ್ ಜಾರಿಯಾದ ನಂತರ ಅಗತ್ಯ ವಸ್ತುಗಳು ಖರೀದಿಸಲು ಸವಾರರು ಹೆಲ್ಮೆಟ್, ಸೀಟ್ಬೆಲ್ಟ್ ಧರಿಸದೇ ಓಡಾಡುತ್ತಿದ್ದರು. ಆಗ ಯಾವುದೇ ರೀತಿ ದಂಡ ವಿಧಿಸುತ್ತಿರಲಿಲ್ಲ. ಪ್ರಸ್ತುತ ಓಡಾಡುವವರ ಸಂಖ್ಯೆ ಹೆಚ್ಚಾದ ಪರಿಣಾಮ, ಇಂದಿನಿಂದ ಹೆಲ್ಮೆಟ್, ಸೀಟ್ಬೆಲ್ಟ್ ಹಾಕದೇ ಓಡಾಡುವವರಿಗೆ ದಂಡ ಹಾಕುತ್ತಿದ್ದಾರೆ. ಪ್ರತಿದಿನ ಎಷ್ಟು ವಾಹನಗಳು ಓಡಾಟ ಮಾಡುತ್ತಿವೆ ಎಂಬುದರ ಮಾಹಿತಿಗಾಗಿ, ದಿನಾಲು ರಸ್ತೆಗಳಿಯುವ ವಾಹನಗಳ ಸಂಖ್ಯೆಯನ್ನು ಬರೆದಿಟ್ಟುಕೊಳ್ಳುತ್ತಿದ್ದಾರೆ. ಸದ್ಯದ ವಾಸ್ತವ ಚಿತ್ರಣವನ್ನ ನಮ್ಮ ಪ್ರತಿನಿಧಿ ವಾಕ್ಥ್ರೂ ಮೂಲಕ ತಿಳಿಸಿದ್ದಾರೆ.