ನಗರದಲ್ಲಿ ಭದ್ರತೆ ಫುಲ್ ಟೈಟ್...ಅನಗತ್ಯ ಓಡಾಟಕ್ಕೆ ಬ್ರೇಕ್ ಹಾಕ್ತಿದೆ ಖಾಕಿ ಪಡೆ - ನಗರದಲ್ಲಿ ಪೊಲೀಸ್ ಫುಲ್ ಟೈಟ್
ಬೆಂಗಳೂರು : ಕೊರೊನಾ ತಡೆಗಟ್ಟಲು ಸರ್ಕಾರ ಲಾಕ್ಡೌನ್ ಮತ್ತಷ್ಟು ಬಿಗಿ ಗೊಳಿಸಲು ಆದೇಶ ಹೊರಡಿಸಿದ್ದು, ನಿನ್ನೆ ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರಮೀಣ್ ಸೂದ್ ನಗರ ಪೊಲೀಸ್ ಆಯುಕ್ತರಿಗೆ ಯಾಕೆ ಅಧಿಕಾರಿಗಳು ಸರಿಯಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ. ಹೀಗಾಗಿ ಇಂದು ನಗರದೆಲ್ಲೆಡೆ ಖಾಕಿ ಪಡೆ ಸಂಪೂರ್ಣ ಅಲರ್ಟ್ ಆಗಿದ್ದು, ಗಲ್ಲಿ, ಗಲ್ಲಿ ರಸ್ತೆಗಳನ್ನ ಬ್ಯಾರಿಕೇಡ್ ಹಾಕಿ, ವಿನಾಕಾರಣ ಅನಗತ್ಯ ಓಡಾಟ ಮಾಡುವವರ ವಾಹನಗಳನ್ನು ಪೊಲೀಸರು ತಡೆಗಟ್ಟಿ ವಾಹನಗಳ ಜಪ್ತಿ ಮಾಡುತ್ತಿದ್ದಾರೆ. ಈ ಕುರಿತಂತೆ ನಮ್ಮ ಪ್ರತಿನಿಧಿ ಹೆಚ್ಚಿನ ಮಾಹಿತಿ ನೀಡಿದ್ದಾರೆ.