ಇದೆಂಥ ಗುಣಮಟ್ಟ: ಒಂದೇ ತಿಂಗಳಲ್ಲಿ ರಿಪೇರಿಗೆ ಬಂದ್ವು ಹೈಟೆಕ್ ಪೊಲೀಸ್ ಚೌಕಿಗಳು! - ಬೆಂಗಳೂರು
ಬೆಂಗಳೂರು: ಈ ಒಂದು ಪೊಲೀಸ್ ಚೌಕಿಯ ವೆಚ್ಚ ಬರೋಬ್ಬರಿ ಎಂಟು ಲಕ್ಷ ರೂಪಾಯಿ. ಆದ್ರೆ ಉದ್ಘಾಟನೆಗೊಂಡು ಒಂದು ತಿಂಗಳು ಕಳೆಯುವಷ್ಟರಲ್ಲೇ ಕುರ್ಚಿ ಕಿತ್ತುಹೋಗಿದೆ. ಫ್ಯಾನ್ ಕೆಲಸ ಮಾಡುತ್ತಿಲ್ಲ. ಈ ಪೊಲೀಸ್ ಕಿಯೋಸ್ಕ್ನ ಬಾಗಿಲು ಮುಚ್ಚಿದ್ರೆ ತೆಗೆಯೋದು ಕಷ್ಟ, ತೆಗೆದ್ರೆ ಹಾಕೋದು ಕಷ್ಟ. ಪಿಪಿಪಿ ಮಾದರಿಯಲ್ಲಿ 20 ವರ್ಷದ ಜಾಹೀರಾತು ಗುತ್ತಿಗೆಗೆ ಸೈನ್ ಪೋಸ್ಟ್ ಸಂಸ್ಥೆ ನಿರ್ಮಿಸಿಕೊಟ್ಟಿರುವ ಪೊಲೀಸ್ ಚೌಕಿಯ ದುರವಸ್ಥೆ ಇದು. ಈಗಾಗಲೇ 23 ಕಡೆಗಳಲ್ಲಿ ಇಂತಹದ್ದೇ ಚೌಕಿಗಳು ಉದ್ಘಾಟನೆಗೊಂಡಿದ್ದು, ಬಹುತೇಕ ಕಡೆ ಈಗಾಗಲೇ ದುರಸ್ತಿಗೆ ಬಂದಿವೆ. ಹೈಟೆಕ್ ಕಿಯೋಸ್ಕ್ ಎಂದು ನಿರ್ಮಾಣ ಮಾಡಿದ್ದು, ಟ್ರಾಫಿಕ್ ಪೊಲೀಸರಿಗೆ ಉಸಿರುಗಟ್ಟಿಸುವ ವಾತಾವರಣ ನಿರ್ಮಾಣವಾಗಿದೆ. ಈ ಕುರಿತಂತೆ ನಮ್ಮ ಈಟಿವಿ ಭಾರತ ಪ್ರತಿನಿಧಿ ಹೆಚ್ಚಿನ ಮಾಹಿತಿ ನೀಡಿದ್ದಾರೆ.