ಹುಬ್ಬಳ್ಳಿ: ಮಾಸ್ಕ್ ಧರಿಸದ ಬೈಕ್ ಸವಾರರಿಗೆ ದಂಡ! - Police fined bike riders
ಮಾಸ್ಕ್ ಡೇ ಆಚರಣೆ ಹಿನ್ನೆಲೆ ಮಾಸ್ಕ್ ಧರಿಸದೆ ದ್ವಿಚಕ್ರ ವಾಹನ ಓಡಿಸುತ್ತಿದ್ದ ಸವಾರರಿಗೆ ಹುಬ್ಬಳ್ಳಿ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ. ಸರ್ಕಾರ ಕೊರೊನಾ ಭೀತಿ ಹಿನ್ನೆಲೆಯಲ್ಲಿ ಮಾಸ್ಕ್ ಕಡ್ಡಾಯ ಮಾಡಿದೆ. ಆದರೂ ಸರ್ಕಾರದ ನಿಯಮ ಉಲ್ಲಂಘಿಸಿ ಮಾಸ್ಕ್ ಇಲ್ಲದೆ ಬೈಕ್ ಓಡಿಸುತ್ತಿದ್ದ ಸವಾರರಿಗೆ 200 ದಂಡ ವಿಧಿಸಿದ್ದಾರೆ. ಅಲ್ಲದೇ ಕಡ್ಡಾಯವಾಗಿ ಮಾಸ್ಕ್ ಧರಿಸಿ ವಾಹನ ಓಡಿಸುವಂತೆ ಸೂಚನೆ ನೀಡಿದ್ದಾರೆ.