ಪೊಲೀಸ್ ಪರೀಕ್ಷೆ ಬರೆಯಲು ಬಂದು ಪರದಾಡಿದ ಅಭ್ಯರ್ಥಿಗಳು - ಪೊಲೀಸ್ ಪರೀಕ್ಷೆ ಬರೆಯಲು ಬಂದವರ ಪರದಾಟ
ಗಂಗಾವತಿ: ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಾಗಿ ಪರೀಕ್ಷೆ ಬರೆಯಲು ಬೇರೆ ಬೇರೆ ಜಿಲ್ಲೆಗಳಿಂದ ನಗರಕ್ಕೆ ಆಗಮಿಸಿದ್ದ ಸಾವಿರಾರು ಅಭ್ಯರ್ಥಿಗಳು ಅಗತ್ಯ ಸೌಲಭ್ಯ ಸಿಗದೆ ಪರದಾಡುವ ಸನ್ನಿವೇಶ ಎದುರಾಗಿತ್ತು. ನಗರದ ವಿವಿಧ ಕಾಲೇಜುಗಳಲ್ಲಿ ಒಟ್ಟು ಎಂಟು ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿತ್ತು. ಸುಮಾರು 2000 ಅಭ್ಯರ್ಥಿಗಳು ನಗರಕ್ಕೆ ಆಗಮಿಸಿದ್ದರು. ಆದರೆ ಅವರಿಗೆ ವ್ಯವಸ್ಥೆ ಸರಿಯಾಗಿ ಇಲ್ಲದೇ ಪರದಾಡಿದ್ದಾರೆ.