ದಟ್ಟಾರಣ್ಯದಲ್ಲಿ ಡಿವೈಎಸ್ಪಿ, ಇನ್ಸ್ಸ್ಪೆಕ್ಟರ್ ದಾರಿ ತಪ್ಪಿಸಿದ್ದೇ ಚಿರತೆ...! - ಪಿಎಸ್ಐ ರವಿಚಂದನ್
ಕಾರವಾರ: ಪ್ರಕರಣವೊಂದರ ತನಿಖೆಗೆ ತೆರಳಿ ಭಾನುವಾರ ನಾಪತ್ತೆಯಾಗಿದ್ದ ಕಾರವಾರದ ಡಿವೈಎಸ್ಪಿ ಶಂಕರ್ ಮಾರಿಹಾಳ, ಗುಪ್ತದಳದ ಪಿಎಸ್ಐ ರವಿಚಂದನ್ ನಾಪತ್ತೆ ಪ್ರಕರಣ ಸುಖಾಂತ್ಯ ಕಂಡಿದೆ. ಪೊಲೀಸ್ ಅಧಿಕಾರಿಗಳು ಸತತ ಕಾರ್ಯಾಚರಣೆ ನಡೆಸಿ ಅಧಿಕಾರಿಗಳನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.