ಬೆಂಗಳೂರಿನ ಟೌನ್ಹಾಲ್ ಬಳಿ ಹೋರಾಟಗಾರರನ್ನು ವಶಕ್ಕೆ ಪಡೆದ ಪೊಲೀಸರು - ಟೌನ್ಹಾಲ್ನಲ್ಲಿ ಪ್ರತಿಭಟನೆ
ಮರಾಠ ಅಭಿವೃದ್ಧಿ ನಿಗಮ ರಚನೆ ಮಾಡಿರುವುದನ್ನು ವಿರೋಧಿಸಿ ಕನ್ನಡಪರ ಸಂಘಟನೆ ಕರ್ನಾಟಕ ಬಂದ್ಗೆ ಕರೆ ನೀಡಿವೆ. ಪ್ರತಿಭಟನಾಕಾರರು ನಗರದ ಟೌನ್ಹಾಲ್ನಿಂದ ಫ್ರೀಡಂಪಾರ್ಕ್‌ವರೆಗೆ ಜಾಥಾ ನಡೆಸಲು ಸಜ್ಜಾಗಿವೆ. ಆದರೆ ಇತ್ತ ಪೊಲೀಸರು ಹೋರಾಟಗಾರರನ್ನು ಟೌನ್ಹಾಲ್ ಬಳಿ ಸುಳಿಯಲು ಬಿಡದಂತೆ ಎಚ್ಚರಿಕೆ ವಹಿಸುತ್ತಿದ್ದಾರೆ. ಜಾಥಾಗೆ ಅವಕಾಶ ನೀಡದ ಕಾರಣ ಟೌನ್ಹಾಲ್ನಲ್ಲಿ ಗುಂಪು ಸೇರಲು ಬಿಡದೇ, ಪ್ರತಿಭಟನೆಗೆ ಆಗಮಿಸಿದ್ದ ಕಾರ್ಯಕರ್ತರನ್ನು ವಶಕ್ಕೆ ಪಡೆದರು. ಈ ಸಂಬಂಧ ಘಟನಾ ಸ್ಥಳದಿಂದ ನಮ್ಮ ಪ್ರತಿನಿಧಿ ನಡೆಸಿರುವ ಪ್ರತ್ಯಕ್ಷ ವರದಿ ಇಲ್ಲಿದೆ.