ಅನಗತ್ಯವಾಗಿ ಓಡಾಡುವ ಮುನ್ನ ಎಚ್ಚರ: ವಾಹನ ಸೀಜ್ ಜತೆಗೆ ದಂಡದ ಬಿಸಿ
ಧಾರವಾಡ: ಕೋವಿಡ್ ಎರಡನೇ ಅಲೆ ತಡೆಗೆ ರಾಜ್ಯದಾದ್ಯಂತ 14 ದಿನಗಳ ಕೊರೊನಾ ಕರ್ಫ್ಯೂ ಹೇರಿ ಸರ್ಕಾರ ಆದೇಶಿಸಿದೆ. ಆದ್ರೆ ಧಾರವಾಡದಲ್ಲಿ ಅಲ್ಲಲ್ಲಿ ವಾಹನ ಸಂಚಾರ ಕಂಡುಬಂದಿದೆ. ಅನಗತ್ಯವಾಗಿ ಓಡಾಡುವ ಜನರಿಗೆ ಪೊಲೀಸರು ಬಿಸಿ ಮುಟ್ಟಿಸುವ ಕೆಲಸ ಮಾಡುತ್ತಿದ್ದಾರೆ. ಅನಗತ್ಯವಾಗಿ ಓಡಾಡುವುದು ಕಂಡ ಬಂದಲ್ಲಿ ವಾಹನ ಸೀಜ್ ಮಾಡಿ ದಂಡ ಹಾಕುವ ಕೆಲಸಕ್ಕೆ ಪೊಲೀಸ್ ಇಲಾಖೆ ಮುಂದಾಗಿದೆ. ಈ ಕುರಿತು ನಮ್ಮ ಪ್ರತಿನಿಧಿ ನೀಡಿರುವ ಒಂದು ಪ್ರತ್ಯಕ್ಷ ವರದಿ ಇಲ್ಲಿದೆ.