ಕರ್ನಾಟಕ

karnataka

ETV Bharat / videos

ಕೊಪ್ಪಳದಲ್ಲಿ ಪೊಲೀಸ್​ ಸಿಬ್ಬಂದಿಗೆ ಕೊರೊನಾ ದೃಢ; ಠಾಣೆಗೆ​ ಸ್ಯಾನಿಟೈಸೇಷನ್​ - Police constable tested corona

By

Published : Jul 5, 2020, 12:38 PM IST

ಕೊಪ್ಪಳ ಜಿಲ್ಲೆಯಲ್ಲಿ ಪೊಲೀಸ್ ಸಿಬ್ಬಂದಿಯೊಬ್ಬರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಕೊಪ್ಪಳ ನಗರ ಪೊಲೀಸ್ ಠಾಣೆಯ 25 ವರ್ಷದ ಪೊಲೀಸ್ ಕಾನ್ಸ್​ಟೇಬಲ್​ಗೆ ಸೋಂಕು ದೃಢವಾಗಿದ್ದು, ಈಗಾಗಲೇ ಅವರನ್ನು ಕೋವಿಡ್ -19 ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಈಗ ನಗರ ಠಾಣೆ, ಗ್ರಾಮೀಣ ಠಾಣೆ ಹಾಗೂ ಮಹಿಳಾ ಠಾಣೆಗಳು ಮೂರೂ ಒಂದೇ ಕಡೆ ಇದ್ದು, ಅಲ್ಲಿನ ಸಿಬ್ಬಂದಿಲ್ಲಿ ಆತಂಕ ಮೂಡಿಸಿದೆ. ಈಗಾಗಲೇ ಕೊಪ್ಪಳ ನಗರ ಠಾಣೆ, ಗ್ರಾಮೀಣ ಠಾಣೆ ಮತ್ತು ಮಹಿಳಾ ಪೊಲೀಸ್ ಠಾಣೆಗೆ ನಗರಸಭೆ ಸಿಬ್ಬಂದಿ ಸೋಂಕು‌ ನಿವಾರಕ ಔಷಧಿ ಸಿಂಪಡಣೆ ಮಾಡುತ್ತಿದ್ದಾರೆ. ಈ ಕುರಿತು ನಮ್ಮ ಕೊಪ್ಪಳ ಪ್ರತಿನಿಧಿ ಪ್ರತ್ಯಕ್ಷ ವರದಿ ನೀಡಿದ್ದಾರೆ.

ABOUT THE AUTHOR

...view details