ಬಳ್ಳಾರಿಯಲ್ಲಿ ನ್ಯೂ ಇಯರ್ ಸೆಲೆಬ್ರೇಷನ್ ಮಾಡಿದ ಪೊಲೀಸರು - ನ್ಯೂ ಇಯರ್ ಸೆಲೆಬ್ರೇಷನ್ ಮಾಡಿದ ಪೊಲೀಸರು
ಬಳ್ಳಾರಿಯ ಗಡಿಗಿ ಚನ್ನಪ್ಪ ವೃತ್ತದ ಬಳಿ ಎಸ್ಪಿ ಸೈದುಲು ಅಡಾವತ್ ಅವರು ಕೇಕ್ ಕತ್ತರಿಸುವ ಮೂಲಕ ಹೊಸ ವರ್ಷಾ ಚರಣೆ ಆಚರಿಸಿದರು. ಗಾಂಧಿನಗರ, ಬ್ರೂಸ್ ಪೇಟೆ ಹಾಗೂ ಸಂಚಾರಿ ಠಾಣೆಯ ಪೊಲೀಸರೊಂದಿಗೆ ಎಸ್ಪಿ ಸೈದುಲ್ಲಾ ಅವರು, ಕೇಕ್ ಕತ್ತರಿಸಿ ಅತ್ಯಂತ ಸರಳವಾಗಿ ಹೊಸ ವರ್ಷವನ್ನ ಬರಮಾಡಿಕೊಂಡರು. ಬಳಿಕ, ಮಾತನಾಡಿದ ಎಸ್ಪಿ ಸೈದುಲು ಅವರು, ಕರ್ತವ್ಯ ನಿರತ ಪೊಲೀಸರಿಗೆ ಯಾವುದು ಕೂಡ ಹೊಸದಲ್ಲ. ನಾವು ನಿಷ್ಠೆಯಿಂದ ಕರ್ತವ್ಯ ನಿಭಾಯಿಸಿದರೆ ದೇಶ ಹಾಗೂ ಜಿಲ್ಲೆ ಸುಭಿಕ್ಷೆಯಿಂದ ಇರುತ್ತೆ. ನಾವು ರಾತ್ರಿ ಪಾಳೆಯವನ್ನ ಅತ್ಯಂತ ಜವಾಬ್ದಾರಿಯಿಂದ ನಿರ್ವಹಿಸಿದರೆ ಮಾತ್ರ ಈ ಜಿಲ್ಲೆಯ ಜನರು ನೆಮ್ಮದಿಯ ನಿದ್ರೆ ಮಾಡಲು ಸಹಕಾರಿಯಾಗುತ್ತೆ. ಯಾರೂ ಕೂಡಾ ಜವಾಬ್ದಾರಿಯಿಂದ ನುಣುಚಿಕೊಳ್ಳಬಾರದು ಎಂದರು.