'ದಯಮಾಡಿ ಮನೆಯಿಂದ ಹೊರ ಬರಬೇಡಿ..': ಹಾವೇರಿ ಪೊಲೀಸರಿಂದ ಮನವಿ - Haveri
ಲಾಕ್ ಡೌನ್ 2ನೇ ದಿನವಾದ ಇಂದು ಹಾವೇರಿಯಲ್ಲಿ ಬಹುತೇಕ ಅಂಗಡಿಗಳು, ಸರ್ಕಾರಿ ಬಸ್ ಮತ್ತು ಖಾಸಗಿ ವಾಹನಗಳ ಓಡಾಟ ಬಂದ್ ಆಗಿದೆ. ಆದ್ರೂ ಕೆಲವು ಖಾಸಗಿ ವಾಹನಗಳು ಮತ್ತು ಬೈಕ್ ಸವಾರರು ಅನಗತ್ಯವಾಗಿ ಮನೆಬಿಟ್ಟು ಹೊರ ಓಡಾಡ್ತಿದ್ದಾರೆ. ಹೀಗಾಗಿ ಬೆಳಿಗ್ಗೆಯೇ ಲಾಠಿ ಕಾರ್ಯಾಚರಣೆಗಿಳಿದ ಪೊಲೀಸರು ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಓಡಾಡ್ತಿರೋ ಬೈಕ್ ಮತ್ತು ವಾಹನ ಸವಾರರಿಗೆ ಮನೆ ಬಿಟ್ಟು ಹೊರ ಬರದಂತೆ ತಿಳಿ ಹೇಳುತ್ತಿದ್ದಾರೆ. ಜೊತೆಗೆ ಕಡ್ಡಾಯವಾಗಿ ಮಾಸ್ಕ್ ಧರಿಸಿ ಕೊರೊನಾ ಸೋಂಕು ಹರಡುವುದನ್ನು ತಡೆಗಟ್ಟಿ ಎಂದು ಜಾಗೃತಿ ಮೂಡಿಸುತ್ತಿದ್ದಾರೆ.