ಹುಬ್ಬಳ್ಳಿಯಲ್ಲಿ 150ನೇ ಗಾಂಧಿ ಜಯಂತಿ ಆಚರಣೆ: ಪ್ಲಾಸ್ಟಿಕ್ ಮುಕ್ತ ಭಾರತ ಸಂಕಲ್ಪ ಯಾತ್ರೆ - Gandhi 150th birthday
ಹುಬ್ಬಳ್ಳಿ: ಮಹಾತ್ಮ ಗಾಂಧೀಜಿಯವರ 150ನೇ ಜಯಂತಿ ಅಂಗವಾಗಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹಾಗೂ ಸಚಿವ ಜಗದೀಶ್ ಶೆಟ್ಟರ್ ಗಾಂಧೀಜಿಯವರ ಪುತ್ಥಳಿಗೆ ಮಾಲರ್ಪಣೆ ಮಾಡಿದರು. ನಂತರ ಪ್ಲಾಸ್ಟಿಕ್ ಮುಕ್ತ ಭಾರತ ಸಂಕಲ್ಪ ಯಾತ್ರೆಯ ಮುಖಾಂತರ ಪರಿಸರ ಸ್ವಚ್ಛತೆಯ ಅರಿವು ಮೂಡಿಸಲಾಯಿತು. ಈ ಸಂಕಲ್ಪ ಯಾತ್ರೆಯು ನಗರದ ಕಿಮ್ಸ್ ಪ್ರವೇಶ ದ್ವಾರದಿಂದ ಪ್ರಾರಂಭವಾಗಿ ವಿವಿಧ ನಗರಗಳಿಗೆ ತೆರಳಿ ಸಾರ್ವಜನಿಕರಲ್ಲಿ ಪ್ಲಾಸ್ಟಿಕ್ನಿಂದಾಗುವ ಅನಾಹುತದ ಬಗ್ಗೆ ತಿಳಿಹೇಳಲಾಯಿತು. ಸಂಕಲ್ಪ ಯಾತ್ರೆಯಲ್ಲಿ ಶಾಸಕ ಅಮೃತ ದೇಸಾಯಿ, ನಾಗುಶಾ ಕಲ್ಬುರ್ಗಿ, ಮಹೇಶ್ ಟೆಂಗಿಕಾಯಿ ಸೇರಿದಂತೆ ಬಿಜೆಪಿಯ ನೂರಾರು ಕಾರ್ಯಕರ್ತರು ಭಾಗಿಯಾಗಿದ್ದರು.