ಪ್ಲಾಸ್ಟಿಕ್‌ಮುಕ್ತ ಪರಿಸರಕ್ಕೆ ಪಣತೊಟ್ಟ ಮಂಗಳೂರಿನ ಮಕ್ಕಳ ಸೇನೆ.. - ಮಂಗಳೂರಿನ ಜೆಪ್ಪಿನಮೊಗರುನಲ್ಲಿರುವ ಗ್ರೀನ್ ವಾರಿಯರ್ಸ್
ಮಂಗಳೂರು: ದೇಶವನ್ನು ಪ್ಲಾಸ್ಟಿಕ್ ಮುಕ್ತ ಮಾಡಲು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದು, ಇದೀಗ ಹಲವು ರಾಜ್ಯಗಳಲ್ಲಿನ ಅದೆಷ್ಟೋ ಸಂಘ ಸಂಸ್ಥೆಗಳು ಒಮ್ಮೆ ಬಳಸಿ ಬಿಸಾಡುವ ಪ್ಲಾಸ್ಟಿಕ್ (Single use plastic) ಬಗ್ಗೆ ಅರಿವು ಮೂಡಿಸುತ್ತಿದೆ. ಆದ್ರೆ, ರಾಜ್ಯದ ಕರಾವಳಿ ನಗರಿಯಲ್ಲಿ ಮಕ್ಕಳ ತಂಡವೊಂದು ಕೈಗೊಂಡಿರುವ ಜಾಗೃತಿ ಎಲ್ಲರ ಗಮನ ಸೆಳೆದಿದೆ.