ಪ್ಲಾಸ್ಟಿಕ್ ನಿಷೇಧ: ಜಾಗೃತಿ ಮೂಡಿಸಲು ವಿನೂತನ ಪ್ರಯತ್ನಕ್ಕೆ ಕೈಹಾಕಿದ ಹು-ಧಾ ಪಾಲಿಕೆ! - ಹುಬ್ಬಳ್ಳಿ- ಧಾರವಾಡ ಸುದ್ದಿ
ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ ಸಾರ್ವಜನಿಕರಲ್ಲಿ ಪ್ಲಾಸ್ಟಿಕ್ ಬಳಸದಂತೆ ಜಾಗೃತಿ ಮೂಡಿಸಲು ವಿನೂತನ ಪ್ರಯತ್ನಕ್ಕೆ ಕೈ ಹಾಕಿದೆ. ಅದೇನಂದರೆ, ಪ್ಲಾಸ್ಟಿಕ್ ನಿಷೇಧದ ಕುರಿತು ಜಾಗೃತಿ ಮೂಡಿಸುವ ಚಿಕ್ಕದ್ದಾದ ಕಿರುಚಿತ್ರದ ಮಾಡಿ, ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ. ಕಿರುಚಿತ್ರದಲ್ಲಿ ಯಾರಾದರೂ ನಿಷೇಧಿತ ಪ್ಲಾಸ್ಟಿಕ್ ಬಳಕೆ ಮಾಡಿದ್ರೆ ಪಾಲಿಕೆ ಅಧಿಕಾರಿಗಳು ದಾಳಿ ಮಾಡಿ ದಂಡ ಹಾಕುತ್ತಾರೆ ಎಂಬುದನ್ನು ಅಚ್ಚಕಟ್ಟಾಗಿ ಕಟ್ಟಿಕೊಡಲಾಗಿದ್ದು, ಹಾಸ್ಯದ ಜೊತೆಗೆ ಗಂಭೀರವಾದ ವಿಷಯವನ್ನು ಉತ್ತರ ಕರ್ನಾಟಕ ಭಾಷೆಯಲ್ಲಿ ಚಿತ್ರೀಕರಿಸಲಾಗಿದೆ. ಪಾಲಿಕೆಯ ಈ ಕಾರ್ಯಕ್ಕೆ ಸಾರ್ವಜನಿಕರ ವಲಯದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ. ಆ ಕಿರುಚಿತ್ರವನ್ನು ನೀವು ಒಮ್ಮೆ ನೋಡಿ...