ರಾಷ್ಟ್ರೋತ್ಥಾನ ರಕ್ತನಿಧಿಯಿಂದ ಪ್ಲಾಸ್ಮಾ ಸಂಗ್ರಹ ; ಕೇಂದ್ರ ಸಚಿವರಿಂದ ಚಾಲನೆ - National Blood Bank
ಹುಬ್ಬಳ್ಳಿ : ಪ್ರತಿಷ್ಠಿತ ರಕ್ತನಿಧಿಯಲ್ಲಿ ಒಂದಾಗಿರುವ ಇಲ್ಲಿನ ರಾಷ್ಟ್ರೋತ್ಥಾನ ರಕ್ತನಿಧಿಯು ಪ್ಲಾಸ್ಮಾ ಸಂಗ್ರಹಣೆಗೆ ಮುಂದಾಗಿದೆ. ಇಂದಿನಿಂದ ಪ್ಲಾಸ್ಮಾ ಸಂಗ್ರಹಣೆ ಪ್ರಾರಂಭ ಮಾಡಿದೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಪ್ಲಾಸ್ಮಾ ಸಂಗ್ರಹಣಾ ಘಟಕಕ್ಕೆ ಚಾಲನೆ ನೀಡಿದ್ದಾರೆ. ರಾಷ್ಟ್ರೋತ್ಥಾನ ರಕ್ತನಿಧಿಯಲ್ಲಿ ಪ್ಲಾಸ್ಮಾ ದಾನಕ್ಕೆ ಮುಂದಾಗಿರುವ ವ್ಯಕ್ತಿಗೆ ನೆನಪಿನ ಕಾಣಿಕೆ ನೀಡಿ ಅಭಿನಂದನೆ ಸಲ್ಲಿಸಿದರು. ಪ್ಲಾಸ್ಮಾ ಥೆರಪಿ ಮೂಲಕ ಕೊರೊನಾ ವೈರಸ್ ನಿಯಂತ್ರಣ ಮಾಡಬಹುದಾಗಿದ್ದು, ಸೋಂಕಿನಿಂದ ಗುಣಮುಖರಾಗಿರುವ ಪ್ರತಿಯೊಬ್ಬರೂ ಪ್ಲಾಸ್ಮಾ ದಾನಕ್ಕೆ ಮುಂದೆ ಬರಬೇಕು ಎಂದು ಸಲಹೆ ನೀಡಿದರು.