ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಗಿಡ ನೆಟ್ಟ DC- SP -
ಇಷ್ಟು ದಿನ ಬೀಜದುಂಡೆ, ಕಾಡಿನಲ್ಲಿ ಬೀಜ ಬಿತ್ತನೆ ಮಾಡುತ್ತಿದ್ದ ಶಿವಮೊಗ್ಗ ಜಿಲ್ಲಾಧಿಕಾರಿಗಳು ಈಗ ತಮ್ಮ ಕಚೇರಿಯ ಆವರಣದಲ್ಲಿ SP ಅವರ ಜೊತೆಗೂಡಿ ಗಿಡಗಳನ್ನು ನೆಟ್ಟಿದ್ದಾರೆ. ಇಂದು ತಮ್ಮ ಕಚೇರಿಯಲ್ಲಿ ಸರಣಿ ಸಭೆಗಳ ನಡುವೆಯೇ ಜಿಲ್ಲಾಧಿಕಾರಿ ಕೆ.ಎ.ದಯಾನಂದ ಹಾಗೂ ಎಸ್ಪಿ ಡಾ. ಅಶ್ವಿನಿರವರು ವಿವಿಧ ತಳಿಯ ಹೂವು, ಹಣ್ಣು ಸಸಿಗಳನ್ನು ಶಿವಮೊಗ್ಗದ ಸಾಲು ಮರದ ಬಸಲಿಂಗಪ್ಪ ಅವರ ನೇತೃತ್ವದಲ್ಲಿ ನಡೆಸಲಾಯಿತು. ಈ ಮೂಲಕ ಜಿಲ್ಲಾಧಿಕಾರಿಗಳು ತಮ್ಮ ಕಚೇರಿ ಆವರಣವನ್ನು ಹಸಿರೀಕರಣ ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯ