ಕಳೆಕಟ್ಟಿದ ಆನೆಗೊಂದಿ ಉತ್ಸವ: ಸಮಕಾಲಿನ ದೃಶ್ಯಾವಳಿಗಳನ್ನ ತೆರೆದಿಟ್ಟ ಛಾಯಾ ಚಿತ್ರ ಪ್ರದರ್ಶನ - Photo exhibition at Anegondi
ಗಂಗಾವತಿ: ಆನೆಗೊಂದಿ ಉತ್ಸವ-2020 ನಿಮಿತ್ತ ಹಮ್ಮಿಕೊಂಡಿದ್ದ ಛಾಯಾ ಚಿತ್ರ ಪ್ರದರ್ಶನ ಪ್ರಾಕೃತಿಕ ಸೊಬಗು, ನಿಸರ್ಗ ವೈಭವ, ಪ್ರಕೃತಿ ಮುನಿಸು ಹೀಗೆ ಸಮಕಾಲಿನ ದೃಶ್ಯಾವಳಿಗಳ ಅನಾವರಣಕ್ಕೆ ಕಾರಣವಾಯಿತು. ಛಾಯಾಚಿತ್ರ ಪ್ರದರ್ಶನದಲ್ಲಿ ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡುವ ಛಾಯಾಗ್ರಾಹಕರು ಸೆರೆ ಹಿಡಿದ ಅದ್ಭುತ ಚಿತ್ರಗಳನ್ನು ಪ್ರದರ್ಶಿಸಲಾಯಿತು. ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ ಪ್ರದರ್ಶನ ಉದ್ಘಾಟಿಸಿದರು. ಶಾಸಕರಾದ ಪರಣ್ಣ ಮುನವಳ್ಳಿ, ಅಮರೇಗೌಡ ಬೈಯಾಪುರ, ಜಿಲ್ಲಾ ಪಂಚಾಯತ್ ಅಧ್ಯಕ್ಷ ವಿಶ್ವನಾಥ ರೆಡ್ಡಿ ಉಪಸ್ಥಿತರಿದ್ದರು.