ಶ್ರೀಸಾಮಾನ್ಯರ ಬದುಕಿಗೇ 'ಕೊಳ್ಳಿ'ಇಟ್ಟ ತೈಲೆ ಬೆಲೆ ಏರಿಕೆ.. ಕೇಂದ್ರದ ವಿರುದ್ಧ 'C-M' ಕಿಡಿ! - Petrol Diesel price increase effect on PublicPetrol Diesel price increase effect on Public
ಕಲಬುರಗಿ : ದಿನದಿಂದ ದಿನಕ್ಕೆ ಶತಕದ ಗಡಿಯತ್ತ ದಾಪುಗಾಲು ಹಾಕುತ್ತಿರುವ ತೈಲ ದರ ಏರಿಕೆಗೆ ಜನ ಸಾಮಾನ್ಯರು ಕಂಗಾಲಾಗಿದ್ದಾರೆ. ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಿಂದ ಹಲವು ಕ್ಷೇತ್ರಗಳ ಮೇಲೆ ಇದರ ನೇರ ಹೊರೆ ಬೀಳಲು ಆರಂಭಿಸಿದೆ. ಜಿಲ್ಲೆಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಇಂದಿನ ದರ ₹90.55 ಹಾಗೂ ಪ್ರತಿ ಲೀಟರ್ ಡೀಸೆಲ್ ₹ 82.55 ಇದೆ. ಕೇಂದ್ರ ಬಜೆಟ್ ನಂತರ ತೈಲ ದರ ಗಣನೀಯವಾಗಿ ಏರಿಕೆಯಾದ ಪರಿಣಾಮ ಸಾರಿಗೆ ಕ್ಷೇತ್ರ ಸೇರಿ ಹಲವು ಕ್ಷೇತ್ರಗಳ ಮೇಲೆ ಪರಿಣಾಮ ಬೀರಿದೆ. ನಗರದಲ್ಲಿ ಸಂಚರಿಸುವ ಆಟೋ ಪ್ರಯಾಣ ದರ ದುಪ್ಪಟ್ಟಾಗಿದೆ. ಮಿನಿಮಮ್ ಚಾರ್ಜ್ 5 ರಿಂದ 10 ರೂಪಾಯಿಗೆ ಏರಿಕೆ ಆಗಿದೆ. 800 ರೂಪಾಯಿದ್ದ ಸ್ವಿಫ್ಟ್ ಕಾರ್ ಬಾಡಿಗೆ 1000 ರೂಪಾಯಿಗೆ ಏರಿಕೆಯಾಗಿದೆ. ರೈತರ ಹೊಲಗಳಿಂದ ತರಕಾರಿಯನ್ನು ಮಾರುಕಟ್ಟೆಗೆ ಸಾಗಾಟ ಮಾಡುವ ವಾಹನಗಳ ಬಾಡಿಗೆ ದುಬಾರಿಯಾಗಿದ್ದು, ಇದರ ಪರಿಣಾಮ ನೇರವಾಗಿ ಗ್ರಾಹಕರ ಮೇಲೆ ಬೀಳುತ್ತಿದೆ. ದ್ವಿಚಕ್ರ ವಾಹನ ಓಡಾಟದಲ್ಲಿಯೇ ದಿನಕಳೆಯುವ ಡಿಲೆವರಿ ಬಾಯ್ಸ್ ಹಾಗೂ ಖಾಸಗಿ ಕಂಪನಿಗಳ ಪ್ರತಿನಿಧಿಗಳ ಪಾಡಂತು ಹೇಳ ತೀರದಂತಾಗಿದೆ. ಕಂಪನಿಗಳು ನೀಡುವ ಸಂಬಳ ಹಾಗೂ ವೆಚ್ಚ ಹೆಚ್ಚು ಕಡಿಮೆ ಸರಿದೂಗ್ತಿದೆ. ಪೆಟ್ರೋಲ್, ಡೀಸೆಲ್ ಬೆಲೆ ದುಪ್ಪಟ್ಟಾದ ಕಾರಣ ಸ್ವಂತ ಜೇಬಿನಿಂದ ಹಣ ಖರ್ಚು ಮಾಡಿಕೊಂಡು ಓಡಾಡುವಂತಾಗಿದೆ ಅನ್ನೋದು ಖಾಸಗಿ ನೌಕರರ ಮಾತಾಗಿದೆ.