ಕರ್ನಾಟಕ ಬಂದ್ಗೆ ಬೆಂಬಲ ನೀಡಿದ ಬಂಕ್ ಮಾಲೀಕರು: ಬೆಂಗಳೂರಲ್ಲಿ ಪೆಟ್ರೋಲ್ ಇಲ್ಲ, ಡೀಸೆಲ್ ಸಿಗಲ್ಲ - ಕರ್ನಾಟಕ ಬಂದ್
ಬೆಂಗಳೂರು: ವಿವಿಧ ರೈತ ಸಂಘಟನೆಗಳು ಕರ್ನಾಟಕ ಬಂದ್ಗೆ ಕರೆ ನೀಡಿದ್ದು, ಕನ್ನಡಪರ ಸಂಘಟನೆಗಳು, ಓಲಾ, ಊಬರ್ ಚಾಲಕರು ಬೆಂಬಲ ನೀಡಿದ್ದಾರೆ. ಇನ್ನು ಕೆಲವರು ನೈತಿಕ ಬೆಂಬಲ ನೀಡಿದ್ದಾರೆ. ಇತ್ತ ಪ್ರತಿಭಟನೆ ಹಿನ್ನೆಲೆ ಪೆಟ್ರೋಲ್ ಬಂಕ್ಗಳು ಬಂದ್ ಆಗಿವೆ. ಸಾರಿಗೆ ಸೇವೆ ಇಲ್ಲದಿದ್ದರೂ ಸ್ವಂತ ವಾಹನದಲ್ಲಿ ಓಡಾಡಬಹುದೆಂದು ಅಂದುಕೊಂಡವರಿಗೆ ಬಂಕ್ ಮಾಲೀಕರು ಶಾಕ್ ನೀಡಿದ್ದಾರೆ. ನಗರದ ಬಹುತೇಕ ಪೆಟ್ರೋಲ್ ಬಂಕ್ಗಳು ಕ್ಲೋಸ್ ಆಗಿದ್ದು, ವಾಹನ ಸವಾರರು ಬಂದು ಹಾಗೆಯೇ ಹೋಗುತ್ತಿರುವ ದೃಶ್ಯಗಳು ಕಂಡು ಬಂದಿವೆ. ಈ ಬಗ್ಗೆ ಈಟಿವಿ ಭಾರತದ ಪ್ರತ್ಯಕ್ಷ ವರದಿ ಇಲ್ಲಿದೆ.