ಲಾಕ್‌ಡೌನ್ ಸಡಿಲಿಕೆ: ರಾಯಚೂರಿನಲ್ಲಿ ಜನಜಂಗುಳಿ - raichur latest news
ಎರಡನೇ ಹಂತದ ಲಾಕ್‌ಡೌನ್ ಸಡಲಿಕೆ ಮಾಡಿದ ಬೆನ್ನಲ್ಲೇ ರಾಯಚೂರಿನಲ್ಲಿ ಜನರ ಓಡಾಟ ಹೆಚ್ಚಳವಾಗಿದೆ. ಹೌದು, ಅವಶ್ಯಕತೆ ವಸ್ತುಗಳ ಪೂರೈಕೆಗೆ ಅನುಮತಿ ನೀಡಿದ್ದು, ನಿತ್ಯ ಬಳಕೆ ವಸ್ತಗಳ ಖರೀದಿಗೆ ಅವಕಾಶ ಕಲ್ಪಿಸಲಾಗಿದೆ. ಇದರಿಂದಾಗಿ ಅಲ್ಲಲ್ಲಿ ಜನಜಂಗುಳಿ ಸೇರಿದ್ದು, ಪೊಲೀಸರಿಗೆ ತಲೆ ನೋವಾಗಿ ಪರಿಣಮಿಸಿದೆ. ನಗರದ ಚಂದ್ರಮೌಳೇಶ್ವರ ಸರ್ಕಲ್‌ನಲ್ಲಿ ಅನವಶ್ಯಕ ವಾಹನಗಳನ್ನು ತಡೆದು ತಪಾಸಣೆ ನಡೆಸುತ್ತಿದ್ದಾರೆ, ಹಾಗಾಗಿ ಕೆಲವು ಕಡೆ ಟ್ರಾಫಿಕ್ ಸಮಸ್ಯೆ ಕೂಡಾ ಉಂಟಾಗಿದೆ.