ಆಹಾರದ ಕಿಟ್ ಪಡೆಯಲು ಎಂಥಾ ಪಡಿಪಾಟಲು ... ಹೀಗಿತ್ತು ಸರತಿ ಸಾಲು: ವಿಡಿಯೋ
ಲಾಕ್ಡೌನ್ ಕಾರಣದಿಂದಾಗಿ ಬಡವರಿಗೆ ಸರ್ಕಾರದ ವತಿಯಿಂದ ಆಹಾರದ ಕಿಟ್ ವಿತರಣೆ ಮಾಡಲಾಗುತ್ತಿದ್ದು, ಈ ಕಿಟ್ ಪಡೆಯಲು ಬಿಸಿಲಿನಲ್ಲಿ ನಿಂತು ನಿಂತು ಸುಸ್ತಾದ ಜನರು ಕ್ಯೂನಲ್ಲಿ ತಮ್ಮ ಚಪ್ಪಲಿ ಬಿಟ್ಟು ನೆರಳಿನಲ್ಲಿ ಕುಳಿತಿರುವ ದೃಶ್ಯ ಬೆಂಗಳೂರಿನ ಸೋಮೇಶ್ವರ ನಗರದಲ್ಲಿ ಕಂಡುಬಂದಿದೆ. ಆಹಾರ ಸಾಮಗ್ರಿಗಳ ಕಿಟ್ ಪಡೆಯಲು ಜನರು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಸಲುವಾಗಿ ಈ ರೀತಿ ಚಪ್ಪಲಿ ಬಿಟ್ಟು ರಸ್ತೆ ಬದಿಯಲ್ಲಿ ಕುಳಿತಿದ್ದರು. ಕಳೆದ 30 ದಿನಗಳಿಂದ ಆಹಾರ ಕಿಟ್ಗಳನ್ನು ಈ ಏರಿಯಾದ ಸುಮಾರು 250 ಜನರಿಗೆ ವಿತರಿಸಲಾಗುತ್ತಿದೆ. ನಿತ್ಯ ಜನರು ಈ ಪದ್ಧತಿಯಲ್ಲಿಯೇ ಕಿಟ್ ಪಡೆದುಕೊಳ್ಳುತ್ತಿದ್ದಾರಂತೆ.