ಅತ್ತ ಕೃಷ್ಣೆಯಲ್ಲಿ ಕೊಚ್ಚಿ ಹೋದ ಜನರ ಬದುಕು; ಇತ್ತ ವೈಭವದಿಂದ ಸಚಿವರ ಕಚೇರಿ ಉದ್ಘಾಟನೆ!
ಕುಂದಾನಗರಿ ಜನರ ಬದುಕು ಕೃಷ್ಣೆಯಲ್ಲಿ ಕೊಚ್ಚಿ ಹೋಗಿದ್ದರೆ ಅಲ್ಲಿಂದ ಆಯ್ಕೆಯಾಗಿ ಸಚಿವರಾದವರು ಸಂತ್ರಸ್ತರ ಸಂಕಷ್ಟ ಮರೆತು ಅದ್ದೂರಿಯಾಗಿ ವೈಭವದಿಂದ ಕಚೇರಿ ಆರಂಭಿಸಿ ಟೀಕೆಗೆ ಒಳಗಾಗಿದ್ದಾರೆ. ಉತ್ತರ ಕರ್ನಾಟಕದಲ್ಲಿ ಸಂಭವಿಸಿದ ನೆರೆ ಹಾವಳಿಯಿಂದ ಜನ ತತ್ತರಗೊಂಡಿದ್ದಾರೆ. ಕೃಷ್ಣೆಯ ನೀರಲ್ಲಿ ಬೆಳಗಾವಿ ಜನರ ಬದುಕು ಕೊಚ್ಚಿ ಹೋಗಿದ್ದು, ಮನೆ ಮಠ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ನೆಪಮಾತ್ರಕ್ಕೆ ಪುನರ್ವಸತಿ ಕೇಂದ್ರಗಳನ್ನು ತೆರೆದಿದ್ದರೂ ಜನರ ಜೀವನ ಬದಲಾಗಿಲ್ಲ. ಆದರೆ ಅಲ್ಲಿನ ಜನರ ಕಷ್ಟಕ್ಕೆ ಸ್ಪಂದಿಸಬೇಕಾದ ಅದೇ ಜಿಲ್ಲೆಯ ಸಚಿವರು ಜನರ ಕಣ್ಣೀರು ಮರೆತು ಅದ್ಧೂರಿಯಾಗಿ ತಮ್ಮ ಕಚೇರಿಗಳ ಪೂಜಾ ಕಾರ್ಯ ನಡೆಸಿದ್ದಾರೆ.