ಹುತ್ತಕ್ಕೆ ಹಾಲೆರೆದು ಸರಳವಾಗಿ ನಾಗರ ಪಂಚಮಿ ಹಬ್ಬದ ಆಚರಣೆ.. - Shimogga
ಶಿವಮೊಗ್ಗ: ಇಂದು ರಾಜ್ಯಾದ್ಯಂತ ನಾಗರ ಪಂಚಮಿ ಹಬ್ಬವನ್ನು ಆಚರಿಸಲಾಗುತ್ತಿದೆ. ಅದರಂತೆ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಶೀರಿಹಳ್ಳಿ ತಾಂಡದಲ್ಲೂ ಸಹ ನಾಗರ ಪಂಚಮಿ ಹಬ್ಬವನ್ನು ಆಚರಿಸಲಾಯಿತು. ನಾಗರ ಪಂಚಮಿ ಹಬ್ಬವನ್ನು ಹಳ್ಳಿಗರು ವಿಶೇಷವಾಗಿ ಆಚರಿಸುತ್ತಾರೆ. ಆದರೆ, ಕೊರೊನಾ ವೈರಸ್ ಇರುವ ಕಾರಣ ಈ ಬಾರಿ ನಾಗರ ಪಂಚಮಿಯನ್ನು ಸರಳವಾಗಿ ಹುತ್ತಕ್ಕೆ ಹಾಲೆರೆದು ಪೂಜೆ ಸಲ್ಲಿಸಿ ಆಚರಿಸಲಾಯಿತು.