ದಾವಣಗೆರೆಯಲ್ಲಿ ದೀಪಾವಳಿ ಹಬ್ಬದ ಖರೀದಿ ಬಲು ಜೋರು - ದೀಪಾವಳಿ ಖರೀದಿ
ಜಿಲ್ಲೆಯಲ್ಲಿ ದೀಪಾವಳಿ ಖರೀದಿಯ ಭರಾಟೆ ಜೋರಾಗಿದೆ. ಕೊರೊನಾ ಭೀತಿ ನಡುವೆಯೂ ಜನೆತ ರಸ್ತೆಗಿಳಿದು ಅಗತ್ಯ ವಸ್ತುಗಳ ಖರೀದಿಯಲ್ಲಿ ತೊಡಗಿದ್ದರು. ಹಬ್ಬಕ್ಕೆಂದು ಹಣ್ಣು, ಹೂವಿನ ಮಾರುಕಟ್ಟೆಯಲ್ಲಿ ಜನಜಾತ್ರೆಯೇ ಸೇರಿತ್ತು. ಕೊರೊನಾ ಮಾರ್ಗಸೂಚಿ ಪಾಲಿಸದೇ ಜನರು ಖರೀದಿಯಲ್ಲಿ ತೊಡಗಿದ್ದರು. ಕಾಳಿಕಾ ದೇವಿ ರಸ್ತೆ, ಚೌಕಿಪೇಟೆ, ಹೈಸ್ಕೂಲ್ ಮೈದಾನ ಸೇರಿದಂತೆ ಪ್ರಮುಖ ಮಾರುಕಟ್ಟೆಯಲ್ಲಿ ವ್ಯಾಪಾರ ವಹಿವಾಟು ಜೋರಾಗಿತ್ತು. ಇನ್ನು, ಕೊರೊನಾ ಭೀತಿ ಕೊಂಚ ಕಡಿಮೆಯಾದಂತೆ ಜನತೆ ಮೈಮರೆತಂತಿತ್ತು.