ಬೆಂಗಳೂರಿನಲ್ಲಿ ಭಾನುವಾರದ ಕರ್ಫ್ಯೂ ಸಡಿಲಿಕೆ, ಏನಂತಾರೆ ಜನ? - sunday curfew latest updates
ಕೊರೊನಾ ಹರಡುವಿಕೆ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಹೇರಿದ್ದ ಭಾನುವಾರದ ಕರ್ಫ್ಯೂ ಸಡಿಲ ಮಾಡಲಾಗಿದೆ. ಕಳೆದ ಭಾನುವಾರ ಕರ್ಫ್ಯೂ ಇದ್ದ ಕಾರಣ ಜನರ ಓಡಾಟ ಸ್ತಬ್ಧವಾಗಿತ್ತು. ಆದರೆ ಇಂದು ನಗರದ ಪಾರ್ಕ್ಗಳಲ್ಲಿ ಜನರ ಓಡಾಟ ಸಾಮಾನ್ಯವಾಗಿದ್ದು, ದೈನಂದಿನ ಚಟುವಟಿಕೆಗಳಲ್ಲಿ ಎಂದಿನಂತೆ ಭಾಗಿಯಾಗುತ್ತಿದ್ದಾರೆ. ಕೊರೊನಾ ತಡೆಗಟ್ಟುವ ನಿಟ್ಟಿನಲ್ಲಿ ಕೆಲವರು ಭಾನುವಾರದ ಕರ್ಪ್ಯೂ ಅವಶ್ಯಕ ಎಂದರೆ, ಮತ್ತೆ ಕೆಲವರು ಲಾಕ್ಡೌನ್ ಸಡಿಲಿಕೆ ಮಾಡಿದ್ದು ಒಳ್ಳೇದಾಯ್ತು ಎಂದು ನಮ್ಮ ಪ್ರತಿನಿಧಿ ಜೊತೆ ಅನಿಸಿಕೆ ಹಂಚಿಕೊಂಡಿದ್ದಾರೆ.
TAGGED:
sunday curfew latest updates