ಕೊಪ್ಪಳ ಜಿಲ್ಲೆಯಲ್ಲಿ ಇಂದಿನಿಂದ ಥಿಯೇಟರ್ ಓಪನ್: ಚಿತ್ರಮಂದಿರಗಳತ್ತ ಸುಳಿಯದ ಜನತೆ - ಲಾಕ್ಡೌನ್ ನಂತರ ಚಿತ್ರಮಂದರಕ್ಕೆ ಬರದ ಜನ
ಕೊಪ್ಪಳ: ಕೊರೊನಾ ಭೀತಿ ಹಾಗೂ ಲಾಕ್ಡೌನ್ನಿಂದ ಕಳೆದ ಆರೇಳು ತಿಂಗಳುಗಳಿಂದ ಬಾಗಿಲು ಹಾಕಿದ್ದ ಚಿತ್ರಮಂದಿರಗಳ ಪುನಾರಂಭಕ್ಕೆ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ. ಹೀಗಾಗಿ ಕೊಪ್ಪಳ ಜಿಲ್ಲೆಯಲ್ಲಿ ಇಂದಿನಿಂದ ಕೇವಲ ಎರಡು ಚಿತ್ರಮಂದಿರಗಳು ಮಾತ್ರ ಚಿತ್ರ ಪ್ರದರ್ಶನಕ್ಕೆ ಸಜ್ಜಾಗಿವೆ. ಆದರೆ, ಪ್ರೇಕ್ಷಕರು ಚಿತ್ರಮಂದಿರಗಳತ್ತ ಸುಳಿಯುತ್ತಿಲ್ಲ. ಜಿಲ್ಲೆಯಲ್ಲಿರುವ ಸುಮಾರು 16 ಚಿತ್ರಮಂದಿರಗಳ ಪೈಕಿ ಇಂದಿನಿಂದ ಕೊಪ್ಪಳದ ಶ್ರೀ ಲಕ್ಷ್ಮಿ ಹಾಗೂ ಗಂಗಾವತಿ ನಗರದ ಹೆಚ್ಎಂಎಸ್ ಚಿತ್ರಮಂದಿರ ಚಿತ್ರ ಪ್ರದರ್ಶನಕ್ಕೆ ತೆರೆದುಕೊಂಡಿವೆ. ಆದರೆ, ಪ್ರೇಕ್ಷಕರೇ ಬರುತ್ತಿಲ್ಲ. ಈ ಕುರಿತು ನಮ್ಮ ಕೊಪ್ಪಳ ಪ್ರತಿನಿಧಿ ನೀಡಿರುವ ಪ್ರತ್ಯಕ್ಷ ವರದಿ ಇಲ್ಲಿದೆ.