ಖಾನಾಪುರ ಗ್ರಾಮಕ್ಕೆ ವಾಸ್ತವ್ಯಕ್ಕೆ ಹೊರಟಿರುವ ಯಾದಗಿರಿ ಡಿಸಿ ಮುಂದೆ ಸಮಸ್ಯೆಗಳ ಸರಮಾಲೆ - ಗ್ರಾಮ ವಾಸ್ತವ್ಯ
ಸುರಪುರ: ರಾಜ್ಯ ಸರ್ಕಾರ ಜಾರಿಗೊಳಿಸಿರುವ 'ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ' ಯೋಜನೆಯ ಗ್ರಾಮವಾಸ್ತವ್ಯ ಕಾರ್ಯಕ್ರಮದ ಅಂಗವಾಗಿ ಯಾದಗಿರಿ ಜಿಲ್ಲಾಧಿಕಾರಿ ಡಾ. ರಾಗಪ್ರಿಯ ಆರ್ ಅವರು ಇಂದು ಸುರಪುರ ತಾಲೂಕಿನ ಖಾನಾಪುರ ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ಮಾಡಲಿದ್ದಾರೆ. ಜಿಲ್ಲಾಧಿಕಾರಿ ಬರುವಿಕೆಯ ನಿರೀಕ್ಷೆಯಲ್ಲಿರುವ ಗ್ರಾಮಸ್ಥರು, ತಮ್ಮ ಸಮಸ್ಯೆಗಳ ಸರಮಾಲೆಯನ್ನೇ ಜಿಲ್ಲಾಧಿಕಾರಿಗಳ ಮುಂದಿಡಲು ಸಜ್ಜಾಗಿದ್ದಾರೆ. ಈ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಅನೇಕ ಸಮಸ್ಯೆಗಳು ಎದ್ದು ಕಾಣುತ್ತಿದ್ದು, ಈ ಬಗ್ಗೆ ಗ್ರಾಮಸ್ಥರ ಏನು ಹೇಳ್ತಾರೆ ಎಂಬ ಬಗೆಗಿನ ವರದಿ ಇಲ್ಲಿದೆ ನೋಡಿ...