ಮಂಜಿನ ನಗರಿಯಲ್ಲಿ ಬಾಗಿಲು ತೆರೆದ ಮದ್ಯದಂಗಡಿ : ಸಾಲುಗಟ್ಟಿ ನಿಂತ ಮದ್ಯಪ್ರಿಯರು - ಮಂಜಿನ ನಗರಿಯಲ್ಲಿ ಬಾಗಿಲು ತೆರೆದ ಮದ್ಯದಂಗಡಿ
ಕೊಡಗು : ಮದ್ಯ ಮಾರಾಟಕ್ಕೆ ಕೇಂದ್ರ ಗೃಹ ಇಲಾಖೆ ಅನುಮತಿ ನೀಡಿರುವ ಹಿನ್ನೆಲೆ ಇಂದು ದೇಶದಾದ್ಯಂತ ಮದ್ಯ ಮಾರಾಟ ಪ್ರಾರಂಭಗೊಂಡಿದ್ದು, ಮಂಜಿನ ನಗರಿ ಮಡಿಕೇರಿಯಲ್ಲೂ ಮಾರಾಟ ಜೋರಾಗಿಯೇ ನಡೆಯುತ್ತಿದೆ. ಸುಮಾರು 40 ದಿನಗಳಿಂದ ಮದ್ಯ ಸಿಗದೆ ಕಂಗಾಲಾಗಿದ್ದ ಮದ್ಯಪ್ರಿಯರು ಇಂದು ಮುಂಜಾನೆಯಿಂದಲೇ ಸರತಿ ಸಾಲಿನಲ್ಲಿ ನಿಂತು ಮದ್ಯ ಖರೀದಿಸುತ್ತಿದ್ದಾರೆ.