ಹೇಗಿದೆ ಸಿಲಿಕಾನ್ ಸಿಟಿಯಲ್ಲಿ ಇವತ್ತಿನ ಪರಿಸ್ಥಿತಿ? ನೋಡೋಣ ಬನ್ನಿ - ಹಾಲು ಅಂಗಡಿಗಳು ಓಪನ್
ದಿನವಿಡೀ ಮನೆಯಿಂದ ಹೊರಬರದಂತೆ ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿರುವುದರಿಂದ ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆಯೇ ಜನರು ಅಗತ್ಯ ವಸ್ತುಗಳನ್ನು ಖರೀದಿಸಿಲು ಅಂಗಡಿಗಳತ್ತ ದುಂಬಾಲು ಬಿದ್ದರು. ಹಾಲು, ಪೇಪರ್ ಹಾಗು ದಿನಸಿಗಳನ್ನು ಕೊಂಡುಕೊಂಡು ವಾಪಸ್ಸಾಗುತ್ತಿದ್ದರು. ಮತ್ತಿಕೆರೆಯ ಬಳಿಯ ಅತ್ಯವಶ್ಯಕ ದಿನಬಳಕೆ ವಸ್ತುಗಳ ಅಂಗಡಿಗಳನ್ನು ಹೊರತುಪಡಿಸಿ ಉಳಿದ ಅಂಗಡಿಗಳು ಬಾಗಿಲು ಮುಚ್ಚಿವೆ. ಈ ಕುರಿತು ನಮ್ಮ ಪ್ರತಿನಿಧಿ ಸಾರ್ವಜನಿಕರನ್ನು ಮಾತನಾಡಿಸಿ ವಿವರವಾದ ರಿಪೋರ್ಟ್ ನೀಡಿದ್ದಾರೆ ನೋಡಿ..
Last Updated : Mar 24, 2020, 10:31 AM IST