ಗುಬ್ಬಿ ಸಂತೆಯಲ್ಲಿ ಕೊರೊನಾ ನಿಯಮಾವಳಿ ಗಾಳಿಗೆ ತೂರಿದ ಜನ - people dont care about corona
ತುಮಕೂರು: ಕೊರೊನಾ ಕಠಿಣ ನಿಯಮಾವಳಿಯನ್ನು ಗಾಳಿಗೆ ತೂರಿ ಗುಬ್ಬಿ ಪಟ್ಟಣದ ಸಂತೆಯಲ್ಲಿ ಜನರು ಸಾಮಾಜಿಕ ಅಂತರ, ಮಾಸ್ಕ್ ಧರಿಸದೆ ಬೇಜವಾಬ್ದಾರಿಯಾಗಿ ಓಡಾಡಿದ್ದಾರೆ. ದಂಡ ಹಾಕುವ ಯತ್ನಕ್ಕೆ ಗುಬ್ಬಿ ತಾಲೂಕು ಆಡಳಿತ ಕೂಡ ಮುಂದಾಗಿಲ್ಲ. ಕೊರೊನಾ ಸೋಂಕಿನ ಎರಡನೇ ಅಲೆ ಜೋರಾಗಿದ್ದು, ಜನ ಎಚ್ಚೆತ್ತುಕೊಳ್ಳದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ.