ಶಿವಮೊಗ್ಗ: ಕೊರೊನಾ ಲೆಕ್ಕಿಸದೇ ಆಯುಧ ಪೂಜೆ ಖರೀದಿಗೆ ಮುಗಿಬಿದ್ದ ಜನ - buy ayudha puja things
ಶಿವಮೊಗ್ಗ: ನಾಳೆ ಆಯುಧ ಪೂಜೆ ಹಾಗೂ ವಿಜಯ ದಶಮಿ ಹಬ್ಬದ ಹಿನ್ನೆಲೆ ನಗರದ ಶಿವಪ್ಪನಾಯಕ ಹೂವಿನ ಮಾರುಕಟ್ಟೆಯಲ್ಲಿ ಕೊರೊನಾ ಲೆಕ್ಕಿಸದೇ ಜನರು ಹಬ್ಬದ ಖರೀದಿಗೆ ಮುಗ್ಗಿಬಿದ್ದಿದ್ದರು. ಹಬ್ಬಕ್ಕೆ ಪ್ರಮುಖವಾದ ಹೂ, ಹಣ್ಣು, ಬಾಳೆದಿಂಡು,ಮಾವಿನ ಎಲೆ,ಬೂದು ಕುಂಬಳಕಾಯಿ ಸೇರಿದಂತೆ ಹಬ್ಬದ ಪೂಜಾ ಸಾಮಗ್ರಿಗಳನ್ನು ಖರೀದಿಸಲು ಜನರು ಗುಂಪು ಸೇರಿದ್ದರು. ಚೆಂಡು ಹೂ ಕೆ.ಜಿಗೆ 200 ಆದರೆ ಸೇವಂತಿ ಹೂ ಸೇರಿದಂತೆ ಇತರೆ ಹೂವಿನ ಬೆಲೆ ಸಾಕಷ್ಟು ದುಬಾರಿಯಾಗಿತ್ತು. ಒಂದೆಡೆ ಕೊರೊನಾ ಮಹಾಮಾರಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದರೂ ಜನರು ಸಾಮಾಜಿಕ ಅಂತರ ಮಾಸ್ಕ್ ಇಲ್ಲದೇ ಖರೀದಿಗೆ ಮುಗಿಬಿದ್ದರು.