ನಿವೇಶನ ಅರ್ಜಿ ಪಡೆಯಲು ಹುಡಾ ಕಚೇರಿ ಮುಂದೆ ಮುಗಿಬಿದ್ದ ಜನ - ಹುಡಾ ಕಛೇರಿ
ಹಾಸನ : ನಿವೇಶನಕ್ಕಾಗಿ ಅರ್ಜಿ ಪಡೆಯಲು ಕೊನೆಯ ದಿನಾಂಕ ಬರುತ್ತಿದ್ದಂತೆ ಹುಡಾ ಕಚೇರಿ ಆವರಣದಲ್ಲಿ ಸಾರ್ವಜನಿಕರ ಸಂಖ್ಯೆ ಹೆಚ್ಚಾಗಿ ಸಾಮಾಜಿಕ ಅಂತರ ಮರೆತು ನೂಕು ನುಗ್ಗಲಿನಲ್ಲಿ ಅರ್ಜಿ ಪಡೆಯಲು ಮುಂದಾದರು. ನಗರದ ಹೊರ ವಲಯ ಬೆಂಗಳೂರು ರಸ್ತೆಯಲ್ಲಿ ನಿರ್ಮಿಸಲಾಗಿರುವ ನಿವೇಶನಕ್ಕೆ ಅರ್ಜಿ ಕರೆದಿದೆ. ಆರಂಭದಲ್ಲಿ ಅರ್ಜಿ ಕೊಡಲಾಯಿತು. ಆದರೆ, ಕೊರೊನಾದಿಂದಾಗಿ ಅದನ್ನ ಮುಂದೂಡಲಾಗಿತ್ತು. ಈಗ ಮತ್ತೆ ಅರ್ಜಿ ಕೊಡಲಾರಂಭಿಸಲಾಗಿದೆ. ಜೂನ್ 25 ಅರ್ಜಿ ಪಡೆಯಲು ಕೊನೆಯ ದಿನ ಎಂದು ಸುದ್ದಿ ತಿಳಿದ ಮೇಲೆ ನಿವೇಶನಕ್ಕಾಗಿ ಅರ್ಜಿ ಪಡೆಯುವವರ ಸಂಖ್ಯೆ ಕೂಡ ಹೆಚ್ಚಾಗತೊಡಗಿತು.