ಲಾಕ್ಡೌನ್ ಆದೇಶ ಮೀರಿ ರಸ್ತೆಗಿಳಿದವರಿಗೆ ಮತ್ತಷ್ಟು ಬಿಸಿ ಮುಟ್ಟಿಸಿದ ಪೊಲೀಸರು - ಪೊಲೀಸರು
ಬೆಂಗಳೂರು: ಸರ್ಕಾರ, ಪೊಲೀಸ್ ಇಲಾಖೆ ಎಷ್ಟೇ ಹೇಳಿದ್ರು ಬೇಜವಾಬ್ದಾರಿಯಿಂದ ರಸ್ತೆಗಿಳಿಯೋ ಜನರಿಗೆ ಸರಿಯಾದ ಶಿಕ್ಷೆ ಸಿಗ್ತಿದೆ. ಅದರಲ್ಲೂ ಮಾಸ್ಕ್ ಹಾಕದೇ ಓಡಾಡೋ ಜನರಿಗೆ ಶಿವಾಜಿನಗರದ ಮಾರ್ಷಲ್ಸ್ ಬಸ್ಕಿ ಹೊಡೆಸಿದ್ದಾರೆ. ಇನ್ನೂ ಕೆಲವರಿಗೆ ಕಪ್ಪೆ ಜಿಗಿತವನ್ನೂ ಮಾಡಿಸಿದ್ದಾರೆ. ಕಿವಿ ಹಿಡಿದು ಹತ್ತತ್ತು ಬಸ್ಕಿ ಹೊಡೆಸಿ, ಮಾಸ್ಕ್ ಹಾಕ್ತೇವೆ ಎಂದು ಹೇಳುವವರೆಗೂ ಅವರನ್ನು ಬಿಡದೇ ಬುದ್ಧಿ ಕಲಿಸಿದ್ದಾರೆ.