ಹಾವೇರಿಯಲ್ಲಿ ಸಂತಶ್ರೇಷ್ಠ ಪೇಜಾವರ ಶ್ರೀಗಳ ನೆನಪು ಕಾರ್ಯಕ್ರಮ - ಹಾವೇರಿ ಪೇಜಾವರ ವಿಶ್ವೇಶ ತೀರ್ಥರ ನೆನಪು
ಹಾವೇರಿ: ಕೃಷ್ಣೈಕ್ಯರಾದ ಪೇಜಾವರ ವಿಶ್ವೇಶ ತೀರ್ಥರ ನೆನಪುಗಳನ್ನು ಮೆಲುಕು ಹಾಕುವ ಕಾರ್ಯಕ್ರಮ ನಗರದಲ್ಲಿ ನಡೆಯಿತು. 'ಕೃಷ್ಣನ ಕೊಳಲಿನ ಕರೆ ಸಂತಶ್ರೇಷ್ಠ ಪೇಜಾವರ ಶ್ರೀಗಳ ಒಂದು ನೆನಪು' ಎಂಬ ಶೀರ್ಷಿಕೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶ್ರೀಗಳ ಶಿಷ್ಯಬಳಗ ಮತ್ತು ಭಕ್ತರು ಪಾಲ್ಗೊಂಡಿದ್ದರು. ನಗರದ ಶ್ರೀಕೃಷ್ಣಮಂದಿರದಲ್ಲಿ ಆಯೋಜನೆಗೊಂಡಿದ್ದ ಕಾರ್ಯಕ್ರಮದಲ್ಲಿ ಶ್ರೀಗಳ ಶಿಷ್ಯರು, ಭಕ್ತರು ಶ್ರೀಗಳ ಜೊತೆಗಿನ ತಮ್ಮ ನೆನಪುಗಳನ್ನು ಮೆಲುಕು ಹಾಕಿದರು.