ರೈಲು ತಡೆಗೆ ಮುಂದಾದ ರೈತರನ್ನು ಅಡ್ಡಗಟ್ಟಿದ ಪೊಲೀಸರು... ಬಿಸಿಲಿನಲ್ಲಿಯೇ ಪ್ರತಿಭಟನೆ - Interrupted Railway Strike by police in kalaburagi
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾಯ್ದೆ ವಿರೋಧಿಸಿ ರೈತ ಮುಖಂಡರು ಕರೆ ನೀಡಿರುವ ದೇಶವ್ಯಾಪಿ ರೈಲು ತಡೆ ಚಳವಳಿಯನ್ನು ಬೆಂಬಲಿಸಿ ಕಲಬುರಗಿಯ ರೈಲ್ವೆ ನಿಲ್ದಾಣಕ್ಕೆ ಆಗಮಿಸಿದ್ದ ಪ್ರತಿಭಟನಾಕಾರರನ್ನು ರೈಲ್ವೆ ಸ್ಟೇಷನ್ ಹೊರ ಭಾಗದಲ್ಲೇ ಪೊಲೀಸರು ತಡೆದಿದ್ದಾರೆ. ಈ ವೇಳೆ ರೈತರು ರೈಲು ತಡೆದು ಪ್ರತಿಭಟನೆಗೆ ಯತ್ನಿಸಿದಾಗ ರೈಲ್ವೆ ಸ್ಟೇಷನ್ ಹೊರಗಡೆ ಬ್ಯಾರಿಕೇಡ್ ಹಾಕಿ ಬಿಗಿ ಭದ್ರತೆ ಒದಗಿಸಲಾಗಿದೆ. ಪೊಲೀಸರ ಈ ನಡೆಯಿಂದ ಆಕ್ರೋಶಿತರಾದ ರೈತರು ಸ್ಟೇಷನ್ ಹೊರಗಡೆ ಬಿಸಿಲಿನಲ್ಲಿಯೇ ಕುಳಿತು ಪ್ರತಿಭಟನೆ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದ್ದಾರೆ.