ಜನರೆಲ್ಲ ಮನೆಯೊಳಗೆ ಸೇರಿದ್ರು... ಮಲ್ಲೇಶ್ವರಂಗೆ ಬಂದ ಮಯೂರ - ಬೆಂಗಳೂರು ಸುದ್ದಿ
ಬೆಂಗಳೂರು: ಕೊರೊನಾ ಆತಂಕದಿಂದ ಜನರೆಲ್ಲಾ ಮನೆ ಸೇರಿದರೆ ಮೂಕ ಪಕ್ಷಿಗಳು ರಸ್ತೆಗೆ ಬಂದಿವೆ. ನಿನ್ನೆಯಷ್ಟೇ ಕೇರಳದಲ್ಲಿ ಬೆಕ್ಕು ರೀತಿಯ ಪ್ರಾಣಿಯೊಂದು ರಸ್ತೆ ದಾಟಿದ್ದು, ವಿಡಿಯೋ ವೈರಲ್ ಆಗಿತ್ತು. ಇದೀಗ ಬೆಂಗಳೂರಿನಲ್ಲಿ ನವಿಲು ನಾಟ್ಯವಾಡುತ್ತಿದೆ. ಬೆಂಗಳೂರಿನ ಹೊರವಲಯದಲ್ಲಷ್ಟೇ ಕಾಣಸಿಗುತ್ತಿದ್ದ ನವಿಲುಗಳು ಇದೀಗ ನಗರಕ್ಕೆ ಬಂದಿವೆ. ಅದರಲ್ಲೂ ನಗರದ ಹಳೆಯ ಬಡಾವಣೆಗಳಾದ ಮಲ್ಲೇಶ್ವರಂ ಹಾಗೂ ಜಯನಗರದಲ್ಲಿ ಕಳೆದ ಎರಡು ದಿನಗಳಿಂದ ನವಿಲುಗಳು ಕಾಣಿಸುತ್ತಿವೆ ಎಂಬುದು ರಸ್ತೆ ಬದಿ ಓಡಾಡುವವರ ಮಾತಾಗಿತ್ತು. ಆದರೆ, ಇಂದು ಸಂಜೆ ಮಲ್ಲೇಶ್ವರಂನ 11ನೇ ಕ್ರಾಸ್ನಲ್ಲಿ ನವಿಲೊಂದು ಹೆಜ್ಜೆ ಹಾಕುತ್ತಾ ಹೋಗುವುದನ್ನು ವ್ಯಕ್ತಿಯೊಬ್ಬರು ವಿಡಿಯೋ ಮಾಡಿದ್ದು, ಇದೀಗ ಆ ವಿಡಿಯೋ ವೈರಲ್ ಆಗಿದೆ.