ಸಾಹಿತಿ ಪಾಟೀಲ ಪುಟ್ಟಪ್ಪ ನಿಧನ ಹಿನ್ನೆಲೆ.. 100 ಮೀಟರ್ ರಾಜ್ಯ ಧ್ವಜದ ಮೆರವಣಿಗೆ - ಹಿರಿಯ ಸಾಹಿತಿ ಪಾಟೀಲ ಪುಟ್ಟಪ್ಪ ನಿಧನ
ಹುಬ್ಬಳ್ಳಿ: ಹಿರಿಯ ಸಾಹಿತಿ ಪಾಟೀಲ ಪುಟ್ಟಪ್ಪ ನಿಧನ ಹಿನ್ನೆಲೆ ಅವರ ಹುಬ್ಬಳ್ಳಿ ನಿವಾಸಕ್ಕೆ ಪಾರ್ಥಿವ ಶರೀರವನ್ನು ತೆಗೆದುಕೊಂಡು ಹೋಗುವ ಸಂದರ್ಭದಲ್ಲಿ, ಕನ್ನಡ ಪರ ಹೋರಾಟ ಸಂಘಟನೆಗಳು 100 ಮೀಟರ್ ರಾಜ್ಯ ಧ್ವಜವನ್ನು ದಾರಿ ಉದ್ದಕ್ಕೂ ಹಿಡಿದು ಗೌರವ ಸಲ್ಲಿಸಿದವು. ಇದೇ ವೇಳೆ ಪಾಪು ಅವರಗೆ ಕರ್ನಾಟಕ ರತ್ನ ಬಿರುದನ್ನು ನೀಡಿ ಗೌರವಿಸಬೇಕೆಂದು ಕನ್ನಡ ಕಾರ್ಯಕರ್ತರು ಸರ್ಕಾರಕ್ಕೆ ಒತ್ತಾಯಿಸಿದರು.