ನೆಲ್ಯಾಡಿಯಲ್ಲಿ ಹೊತ್ತಿ ಉರಿದು ಅಸ್ಥಿಪಂಜರದಂತಾದ ವಾಹನ! - Passenger vehicle burned out Nelyadi at Dakshina kannada
ಶಾರ್ಟ್ ಸರ್ಕ್ಯೂಟ್‌ಗೆ ಒಳಗಾಗಿ ಪ್ಯಾಸೆಂಜರ್ ವಾಹನವೊಂದು ಸಂಪೂರ್ಣ ಸುಟ್ಟು ಹೋದ ಘಟನೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ 75ರ ನೆಲ್ಯಾಡಿ ಸಮೀಪದ ಮಣ್ಣಗುಂಡಿ ಎಂಬಲ್ಲಿ ಇಂದು ಮಧ್ಯಾಹ್ನ ನಡೆದಿದೆ. ಶಿರಾಡಿಯಿಂದ ನೆಲ್ಯಾಡಿಗೆ ಬರುತ್ತಿದ್ದ ಈ ವಾಹನದಲ್ಲಿ ಚಾಲಕ ಸೇರಿ ಮೂವರು ಪ್ರಯಾಣಿಸುತ್ತಿದ್ದರು. ಮಣ್ಣಗುಂಡಿ ಸಮೀಪಿಸುತ್ತಿದ್ದಂತೆ ವಾಹನದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಇದು ಅರಿವಿಗೆ ಬರುತ್ತಿದ್ದಂತೆ ಚಾಲಕ ವಾಹನವನ್ನು ರಸ್ತೆ ಬದಿಗೆ ನಿಲ್ಲಿಸಿದ್ದಾನೆ. ಆದರೆ, ಬೆಂಕಿಯ ಜ್ವಾಲೆ ಹೆಚ್ಚಾಗಿ ವಾಹನ ಸಂಪೂರ್ಣ ಸುಟ್ಟು ಹೋಗಿದೆ. ಅದೃಷ್ಟವಶಾತ್ ಚಾಲಕ ಸೇರಿದಂತೆ ಮೂವರು ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
Last Updated : Feb 9, 2021, 6:26 PM IST