ಕರ್ನಾಟಕ

karnataka

ETV Bharat / videos

ಎಸ್​ಎಸ್​​ಎಲ್​ಸಿ ಫಲಿತಾಂಶ ಹೆಚ್ಚಳಕ್ಕೆ ಪೋಷಕರಿಂದ ಸ್ವಯಂ ಪ್ರೇರಿತ ಡಿಶ್ ಸಂಪರ್ಕ ಕಡಿತ - Dish connection cut

By

Published : Apr 10, 2021, 10:00 PM IST

Updated : Apr 11, 2021, 12:21 AM IST

ಕೊಪ್ಪಳ ಜಿಲ್ಲೆ ಎಸ್​ಎಸ್​​ಎಲ್​ಸಿ ಫಲಿತಾಂಶದಲ್ಲಿ ಹಿಂದಿದೆ ಅನ್ನೋ ಹಣೆಪಟ್ಟಿ ಕಟ್ಟಿಕೊಂಡಿದೆ. ಆದ್ರೆ ಈ ಬಾರಿ ಮಾತ್ರ ಉತ್ತಮ ಫಲಿತಾಂಶ ತಂದುಕೊಡಲೇಬೇಕು ಅಂತ ಕೊಪ್ಪಳ ತಾಲೂಕಿನ ಮೈನಳ್ಳಿ, ಬಿಕನಳ್ಳಿ ಹಾಗೂ ಹಂದ್ರಾಳ ಗ್ರಾಮಗಳು ಪಣ ತೊಟ್ಟಿವೆ. ಇದಕ್ಕಾಗಿ ಮನೆಯಲ್ಲಿದ್ದ ಡಿಶ್ ಸಂಪರ್ಕವನ್ನೇ ಬಂದ್ ಮಾಡಿಸಿದ್ದಾರೆ. ಉತ್ತಮ ಫಲಿತಾಂಶ ಬರಲಿ ಅಂತ ಗ್ರಾಮಸ್ಥರೇ ಸ್ವಯಂ ಪ್ರೇರಿತರಾಗಿ ಈ ನಿರ್ಧಾರಕ್ಕೆ ಬಂದಿದ್ದಾರೆ. ಮನೆಯಲ್ಲಿ ಟಿವಿ ನೋಡುವವರಿದ್ದರೆ ಅವರ ಜೊತೆ ಮಕ್ಕಳು ಸೇರಿಕೊಂಡು ಟಿವಿ ನೋಡುತ್ತಾರೆ. ಪರೀಕ್ಷೆ ಸಮಯ ಆಗಿರೋದ್ರಿಂದ ಅವರಲ್ಲಿ ಓದಿನ ಬಗ್ಗೆ ಹೆಚ್ಚು ಆಸಕ್ತಿ ಬರಲಿ ಅಂತ ಕಳೆದ 15 ದಿನಗಳಿಂದ ಟಿವಿ ಬಂದ್ ಮಾಡಿಸಿದ್ದೇವೆ ಅಂತಾರೆ ಗ್ರಾಮಸ್ಥರು.
Last Updated : Apr 11, 2021, 12:21 AM IST

ABOUT THE AUTHOR

...view details