ಪ್ಯಾರಾಗ್ಲೈಡಿಂಗ್ ಮೂಲಕ ಮತದಾನದ ಕುರಿತು ಜಾಗೃತಿ - Dharwad
ಧಾರವಾಡದಲ್ಲಿ ಜಿಲ್ಲಾ ಸ್ವೀಪ್ ಸಮಿತಿ ಬೆಂಗಳೂರು ಏವಿಯೇಷನ್ ಮತ್ತು ಸ್ಪೋರ್ಟ್ಸ್ ಎಂಟರ್ಪ್ರೈಸಸ್ ಸಹಯೋಗದಲ್ಲಿ ಮತದಾರರ ಜಾಗೃತಿಗಾಗಿ ಪ್ಯಾರಾಗ್ಲೈಡಿಂಗ್ ಕಾರ್ಯಕ್ರಮ ನಡೆಸಲಾಯಿತು. ಕರ್ನಾಟಕ ಕಾಲೇಜು ಮೈದಾನದಿಂದ ಬಾನಂಗಳಕ್ಕೆ ಹಾರಿದ ಪ್ಯಾರಾಗ್ಲೈಡಿಂಗ್ ನಗರ ಹಾಗೂ ಸುತ್ತಮುತ್ತಲಿನ ಸ್ಥಳಗಳ ಮೇಲೆ ಸಂಚರಿಸಿ ಮತದಾರರ ಜಾಗೃತಿ ಕರಪತ್ರಗಳನ್ನು ಹಂಚಲಾಯಿತು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಬಿ.ಸಿ.ಸತೀಶ ಅವರು ಆಗಸದಿಂದ ಮತದಾರರ ಸಂದೇಶ ಹರಡಿದರು.