ಸುರಪುರದಲ್ಲಿ ಖರೀದಿದಾರರಿಲ್ಲದೆ ಕೊಳೆಯುತ್ತಿರುವ ಪಪ್ಪಾಯಿ ಬೆಳೆ.. - ಸುರಪುರ ಪಪ್ಪಾಯಿ ಬೆಳೆ ನಾಶ
ಯಾದಗಿರಿ: ಸುರಪುರ ತಾಲೂಕಿನ ಹಾಲಬಾವಿ, ಚಿಕ್ಕನಹಳ್ಳಿ, ದೇವತ್ಕಲ್ ಸೇರಿದಂತೆ ಅನೇಕ ಗ್ರಾಮಗಳ ರೈತರು ಬೆಳೆದ ಪಪ್ಪಾಯಿ ಬೆಳೆ ಕಟಾವಿಗೆ ಬಂದಿದ್ದು, ಖರೀದಿದಾರರಿಲ್ಲದೆ ರೈತರು ಕಣ್ಣೀರು ಹಾಕುವಂತಾಗಿದೆ. ಸಿದ್ದಾಪುರ (ಬಿ) ಗ್ರಾಮದ ರೈತ ಪ್ರಭುಗೌಡ 7 ಲಕ್ಷಕ್ಕೂ ಅಧಿಕ ಹಣ ಖರ್ಚು ಮಾಡಿ ಪಪ್ಪಾಯಿ ಬೆಳೆದಿದ್ದು, ಮಾರಾಟವಾಗದೆ ಹಣ್ಣು, ಮಣ್ಣು ಪಾಲಾಗುತ್ತಿದೆ. ಈ ಹಿನ್ನೆಲೆ ಸರ್ಕಾರ ನೆರವಿಗೆ ಬರಬೇಕೆಂದು ರೈತರು ವಿನಂತಿಸಿಕೊಂಡಿದ್ದಾರೆ.