ತನ್ನ ಮನೆಯೇ ಮುಳುಗುತ್ತಿದ್ದರೂ ಇಬ್ಬರ ಜೀವ ರಕ್ಷಿಸಿದ ಫಕೀರ್ ಸಾಹೇಬ್ರು.. - pakeer sab
ಎರಡು ದಿನಗಳ ಹಿಂದೆ ವರುಣನ ಆರ್ಭಟದಿಂದಾಗಿ ಉಡುಪಿಯಲ್ಲಿ ಹಲವರು ನೆರೆಯಲ್ಲಿ ಸಿಕ್ಕಿ ನಲುಗಿದ್ರೆ, ಮತ್ತೊಂದಿಷ್ಟು ರಕ್ಷಣೆ ಪಡೆಯಲು ಹೆಣಗಾಡ್ತಿದ್ದರು. ಆದರೆ, ಬೊಮ್ಮರಬೆಟ್ಟು ಗ್ರಾಮದ ಪುತ್ತಿಗೆ ನಿವಾಸಿ ಫಕೀರ್ ಸಾಹೇಬ್ರು ಎಂಬುವರ ಮನೆಯೊಳಗೆ ಸೊಂಟದ ಮಟ್ಟ ನೀರಿದ್ದರೂ ನೆರೆಯಲ್ಲಿ ಸಿಲುಕಿದ್ದವರ ರಕ್ಷಣೆಯಲ್ಲಿ ತೊಡಗಿದ್ರು. ನೆರೆ ರಕ್ಷಕ ಆಪತ್ಬಾಂಧವ ಫಕೀರ್ ಸಾಹೇಬರ ಮನೆಯೂ ಇದೀಗ ಬೀಳುವ ಸ್ಥಿತಿಯಲ್ಲಿದೆ. ಸುವರ್ಣ ನದಿಯ ಪ್ರವಾಹಕ್ಕೆ ಸಿಲುಕಿಕೊಂಡು ಬಜೆ ಪಂಪ್ ಹೌಸ್ ಜನರೇಟರ್ ಮೇಲೆ ಕೂತಿದ್ದ ಇಬ್ಬರು ಪಂಪ್ ಹೌಸ್ ಸಿಬ್ಬಂದಿಯನ್ನು ಫಕೀರ್ ಸಾಹೇಬ್ರು ರಕ್ಷಣೆ ಮಾಡಿದ ಬಗ್ಗೆ ರೋಚಕ ಕಹಾನಿಯ ವಿಡಿಯೋ ಇಲ್ಲಿದೆ ನೋಡಿ.